Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 24 ಫೆಬ್ರವರಿ 2019 (08:31 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮನೆ ಖರ್ಚು ವೆಚ್ಚಗಳ ಬಗ್ಗೆ ಸಂಗಾತಿ ಜತೆ ಚರ್ಚಿಸಿ, ಹೊಸ ವ್ಯವಹಾರಗಳಿಗೆ ಕೈ ಹಾಕಿ. ಅನಿರೀಕ್ಷಿತವಾಗಿ ನೆಂಟರು ಬರುವ ಸುದ್ದಿ ಸಿಗುವುದು. ಸಹೋದರಿಯ ವಿವಾಹ ಸಂಬಂಧೀ ಕೆಲಸಗಳಿಗೆ ಓಡಾಡುವಿರಿ.

ವೃಷಭ: ಹೊಸ ವೃತ್ತಿ, ಉದ್ಯೋಗದ ಬಗ್ಗೆ ಹೊಸ ಐಡಿಯಾಗಳು ಹೊಳೆಯಲಿವೆ. ಆದರೆ ಹಿತಶತ್ರಗಳು ನಿಮ್ಮ ಜತೆಗೇ ಇರುತ್ತಾರೆ. ಯಾರನ್ನೂ ಅತಿಯಾಗಿ ನಂಬಬೇಡಿ. ಆರ್ಥಿಕವಾಗಿ ಕೊಂಚ ಚೇತರಿಕೆ ಕಾಣುವಿರಿ.

ಮಿಥುನ: ಹುಳುಕು ಮಾತುಗಳಿಗೆ, ಚಾಡಿ ಹೇಳುವವರಿಗೆ ಮನ್ನಣೆ ನೀಡಬೇಕಿಲ್ಲ. ಸಂಗಾತಿ ಜತೆಗೆ ಸುಮಧುರ ಕ್ಷಣ ಕಳೆಯುವಿರಿ. ಮಕ್ಕಳಿಂದ ಸಂತೋಷ ಸಿಗುವುದು. ವಿದೇಶ ಪ್ರಯಾಣದ ಯೋಗವೂ ಇದೆ.

ಕರ್ಕಟಕ: ವಾಸಸ್ಥಳ ಬದಲಾವಣೆಗೆ ಚಿಂತನೆ ಮಾಡುವಿರಿ. ಹೊಸ ಆಸ್ತಿ ಖರೀದಿಗೂ ಮನಸ್ಸಾಗುವುದು. ಆದರೆ ಮನೆಯಲ್ಲಿ ಹಿರಿಯರಿದ್ದರೆ ಅವರ ಸಲಹೆಗಳಿಗೆ ಕಿವಿಗೊಡಿ. ಸಾಲ ಕೊಡಲು ಹೋಗಬೇಡಿ. ಮರಳಿ ಸಿಗುವುದು ಕಷ್ಟ.

ಸಿಂಹ: ಹೊಸ ವ್ಯವಹಾರಗಳಿಗೆ ಕೈ ಹಾಕುವಾಗ ಸಾಕಷ್ಟು ಅಡ್ಡಿ ಆತಂಕಗಳು ಎದುರಾಗಬಹುದು. ಆದರೆ ದೈವತಾ ಪ್ರಾರ್ಥನೆಯಿಂದ ಎಲ್ಲವೂ ಶುಭಕರವಾಗಲಿದೆ. ಅವಿವಾಹಿತರಿಗೆ ವಿವಾಹಕ್ಕೆ ಇದ್ದ ಅಡ್ಡಿ ಆತಂಕಗಳು ದೂರವಾಗುವುದು.

ಕನ್ಯಾ: ಕೌಟುಂಬಿಕವಾಗಿ ವಿನೋದ ಯಾತ್ರೆ ಕೈಗೊಂಡು ಸಂತೋಷದ ದಿನ ನಿಮ್ಮದಾಗಿಸುವಿರಿ. ಆದರೆ ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಮಕ್ಕಳ ಆರೋಗ್ಯ ಹದಗೆಟ್ಟು ಚಿಂತೆಗೀಡಾಗುವುದು. ಆದರೆ ಯಾವುದೂ ಗಂಭೀರ ಸಮಸ್ಯೆಗಳಲ್ಲ.

ತುಲಾ: ವ್ಯಾಪಾರಿಗಳಿಗೆ ಸಾಕಷ್ಟು ಲಾಭವಾಗಲಿದೆ. ಕೃಷಿ ಕ್ಷೇತ್ರದಲ್ಲಿರುವವರಿಗೆ  ಅಭಿವೃದ್ಧಿ ಗೋಚರಕ್ಕೆ ಬರುವುದು. ನಿರುದ್ಯೋಗಿಗಳಿಗೆ ನಿರೀಕ್ಷಿಸಿದ ಉದ್ಯೋಗ ಸಿಗುವುದು. ಹೆಚ್ಚಿನ ಅನುಕೂಲಕ್ಕಾಗಿ ಕುಲದೇವರ ಆರಾಧನೆ ಮಾಡಿ.

ವೃಶ್ಚಿಕ: ವಿದ್ಯಾರ್ಥಿಗಳು ತೀವ್ರ ಪ್ರಯತ್ನ ನಡೆಸಬೇಕಾಗುತ್ತದೆ. ವ್ಯಾಪಾರಿಗಳಿಗೆ ನಂಬಿದವರಿಂದಲೇ ಬೆನ್ನಿಗೆ ಇರಿತವಾಗುವುದು. ಆದರೆ ಸಂಗಾತಿಯ ಸಹಕಾರ ಸಿಗುವುದು. ಮಾನಸಿಕ ಚಿಂತೆ ಕಾಡುತ್ತಿದ್ದರೆ ದೇವರ ಮೊರೆ ಹೋಗಿ. ಎಲ್ಲವೂ ಶುಭವಾಗುವುದು.

ಧನು: ವಿದ್ಯಾರ್ಥಿಗಳು ಪರೀಕ್ಷಾರ್ಥ ತೀವ್ರ ಪ್ರಯತ್ನ ನಡೆಸಬೇಕಾಗುವುದು. ಹಿರಿಯರಿಗೆ ಮಕ್ಕಳಿಂದಲೇಎ ಬೇಸರವಾಗುವುದು. ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುವಿರಿ. ಆದರೆ ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಿರದು.

ಮಕರ: ಎಲ್ಲಾ ಇದ್ದರೂ ಯಾವುದೋ ಒಂದು ಬೇಡದ ಆಲೋಚನೆಯಿಂದ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವುದರ ಬಗ್ಗೆ ಚಿಂತನೆ ನಡೆಸುವಿರಿ. ಆದರೆ ಸಹೋದರರ ಅಸಹಕಾರ ನಿಮ್ಮ ಕಿರಿ ಕಿರಿ ಹೆಚ್ಚಿಸುವುದು. ತಾಳ್ಮೆಯಿಂದಿರಿ.

ಕುಂಭ: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಪ್ರಯಾಣದಲ್ಲಿ ಎಚ್ಚರ. ವಾಹನ ಚಾಲಕರಿಗೆ ಅಪಘಾತದ ಭೀತಿಯಿದೆ. ಮನೆಯಲ್ಲಿ ಗೃಹಿಣಿಯ ಸಹಕಾರ ಸಿಕ್ಕಿ ನೆಮ್ಮದಿ ಸಿಗುವುದು. ದಿನದಂತ್ಯಕ್ಕೆ ಶುಭ ಸುದ್ದಿ.

ಮೀನ: ಅನಿರೀಕ್ಷಿತವಾಗಿ ಬರುವ ಬಂಧು ಮಿತ್ರರಿಂದ ಶುಭ ಸುದ್ದಿ ಕೇಳುವಿರಿ. ವಾಹನ, ಆಸ್ತಿ ಖರೀದಿಗೆ ಮನಸ್ಸು ಮಾಡುವಿರಿ. ಸಾಲಗಾರರಿಂದ ಸಾಲ ಪಾವತಿಯಾಗಿ ಆರ್ಥಿಕವಾಗಿ ಚೇತರಿಕೆ ಕಂಡುಬರುತ್ತದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                  

Share this Story:

Follow Webdunia kannada

ಮುಂದಿನ ಸುದ್ದಿ

ಇವರಿಗೆ ದಾನ ಮಾಡುವುದರಿಂದ ಐಶ್ವರ್ಯ ಪ್ರಾಪ್ತಿಯಾಗುತ್ತದೆಯಂತೆ