ಬೆಂಗಳೂರು: ಬಹುತೇಕರು ಇಂದಿನ ಜೀವನ ಶೈಲಿಯಿಂದಾಗಿ ಕಿಡ್ನಿಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಅದರಲ್ಲಿ ಕಿಡ್ನಿ ಸ್ಟೋನ್ ಕೂಡಾ ಒಂದು.
ಕಿಡ್ನಿ ಸ್ಟೋನ್ ಇದ್ದಾಗ ರೋಗಿಗೆ ತೀವ್ರ ಥರದ ಹೊಟ್ಟೆ ನೋವು, ಮೂತ್ರಿಸುವಾಗ ನೋವು ಅಥವಾ ಉರಿ, ಜ್ವರ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು.
ಕಿಡ್ನಿ ಸ್ಟೋನ್ ಬಂದಾಗ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಅನಿವಾರ್ಯ. ಹರಳಿನ ಗಾತ್ರ ಚಿಕ್ಕದಾಗಿದ್ದರೆ ಔಷಧಿಯಲ್ಲೇ ಹೋಗಲಾಡಿಸಬಹುದು. ಇಂತಹ ಸಂದರ್ಭದಲ್ಲಿ ವೈದ್ಯರು ನೀಡುವ ಔಷಧಿ ಜೊತೆಗೆ ಮನೆ ಮದ್ದು ಕೂಡಾ ಮಾಡಬಹುದು.
ಅದಕ್ಕೆ ಬೇಕಾಗಿರುವುದು ಕಾಲು ಕಪ್ ನಿಂಬೆ ರಸ, ಅಷ್ಟೇ ಪ್ರಮಾಣದಲ್ಲಿ ಆಲಿವ್ ಆಯಿಲ್ ಬೆರೆಸಿ ಸಾಕಷ್ಟು ನೀರಿನ ಜೊತೆಗೆ ಸೇವಿಸಬೇಕು. ಇದೇ ರೀತಿ ದಿನಕ್ಕೆ 2-3 ಬಾರಿ ಮಾಡುತ್ತಿದ್ದರೆ ಕಿಡ್ನಿ ಸ್ಟೋನ್ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಸಿಗುತ್ತದೆ. ನೆನಪಿರಲಿ, ಮನೆ ಮದ್ದು ಮಾಡುವ ಮೊದಲು ವೈದ್ಯರ ಸಲಹೆ ಅತ್ಯಗತ್ಯವಾಗಿ ಪಡೆಯಿರಿ.