Select Your Language

Notifications

webdunia
webdunia
webdunia
webdunia

ದೋಸೆ ಹಿಟ್ಟು ಬೇಗನೇ ಹುಳಿ ಬಾರದಂತೆ ತಡೆಯಲು ಟಿಪ್ಸ್

Dosa Batter

Krishnaveni K

ಬೆಂಗಳೂರು , ಬುಧವಾರ, 22 ಮೇ 2024 (12:53 IST)
Photo Courtesy: Twitter
ಬೆಂಗಳೂರು: ದೋಸೆ ಹಿಟ್ಟು ತಯಾರಿಸಿದ ಮೇಲೆ ಅದು ಹುಳಿ ಬಾರದಂತೆ ಹೆಚ್ಚು ಸಮಯ ಬಾಳಿಕೆ ಬರಲು ಏನು ಮಾಡಬೇಕು ಎಂಬುದೇ ಎಲ್ಲರ ತಲೆನೋವಾಗಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಹಿಟ್ಟು ಹುಳಿಯಾಗುವುದು ಹೆಚ್ಚು. ಇದಕ್ಕೆ ಪರಿಹಾರವೇನು? ಇಲ್ಲಿದೆ ಟಿಪ್ಸ್.

ಕೆಲವರು ದೋಸೆ ಹಿಟ್ಟನ್ನು ಫ್ರಿಡ್ಜ್ ನಲ್ಲಿಟ್ಟು ಬೇಕಾದಾಗಲೆಲ್ಲಾ ಬಳಸಿಕೊಳ್ಳಬಹುದು. ಒಂದು ವೇಳೆ ಫ್ರಿಡ್ಜ್ ಸೌಕರ್ಯವಿಲ್ಲದಿದ್ದರೆ ಅಥವಾ ಫ್ರಿಡ್ಜ್ ನಲ್ಲಿ ಇಡಲು ಇಷ್ಟವಿಲ್ಲದೇ ಇದ್ದಾಗ ದೋಸೆ ಹಿಟ್ಟನ್ನು ಹುಳಿ ಬಾರದಂತೆ ಕಾಪಾಡಿಕೊಳ್ಳಲು ಕೆಲವೊಂದು ಸುಲಭ ಉಪಾಯಗಳಿವೆ. ಅವುಗಳನ್ನು ಮಾಡಿ ನೋಡಬಹುದು.

ದೋಸೆ ಹಿಟ್ಟನ್ನು ಮಿಕ್ಸಿ ಅಥವಾ ಗ್ರೈಂಡರ್ ನಲ್ಲಿ ಅರೆದರೆ ತಕ್ಷಣ ಅದು ಸ್ವಲ್ಪ ಬಿಸಿಯಾಗಬಹುದು. ಹೀಗಾಗಿ ಅದಕ್ಕೆ ಕೊಂಚ ತಣ್ಣಗಿನ ನೀರು ಹಾಕಿಡಿ. ಇನ್ನು ತಕ್ಷಣವೇ ಉಪ್ಪು ಹಾಕಿ ಇಡಬೇಡಿ. ಒಂದು ವೇಳೆ ಉಪ್ಪು ಹಾಕಿದರೂ ಅದನ್ನು ತೊಳೆಸದೇ ಹಾಗೇ ಬಿಡಿ. ಉಪಯೋಗಿಸುವ ಕೆಲವೇ ಕ್ಷಣಗಳ ಮೊದಲು ತೊಳೆಸಿಕೊಂಡರೆ ಸಾಕು.

ಹಿಟ್ಟು ರೆಡಿ ಮಾಡಿದ ತಕ್ಷಣ ಅದನ್ನು ಕೈಯಿಂದ ಹದ ಮಾಡಲು ಹೋಗಬೇಡಿ. ಹೀಗೆ ಮಾಡುವುದರಿಂದ ಬೇಗನೆ ಹುಳಿಯಾಗುವುದು. ಅದಕ್ಕಾಗಿ ಯಾವುದಾದರೂ ಸೌಟು ಹಿಡಿದು ತೊಳೆಸಿಕೊಳ್ಳಿ. ಯಾವುದಾದರೂ ತಟ್ಟೆಗೆ ತಣ್ಣಗಿನ ನೀರು ಹಾಕಿ ಅದರ ಮೇಲೆ ಹಿಟ್ಟನ್ನು ಇಡಬಹುದು.

ದೋಸೆ ಹುಯ್ಯುವ ಮೊದಲು ಕೊಂಚ ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟು ಸೇರಿಸಿ ಹುಯ್ದರೆ ಹಿಟ್ಟು ಹುಳಿಯೆನಿಸದು. ಬಿಸಿಯಿರುವ ಜಾಗದಲ್ಲಿ ಅಂದರೆ ಸ್ಟವ್ ಮೇಲೆ ದೋಸೆ ಹಿಟ್ಟನ್ನು ಇಡಬೇಡಿ. ದೋಸೆ ಹಿಟ್ಟು ಹುಳಿ ಬಾರದಂತೆ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಷ್ ಮಾಡುವ ಮೊದಲು ಕಾಫಿ ಕುಡಿಯುತ್ತೀರೆಂದರೆ ಇದನ್ನು ಓದಿ