Select Your Language

Notifications

webdunia
webdunia
webdunia
webdunia

ಒಣದ್ರಾಕ್ಷಿಯನ್ನು ನೆನೆಹಾಕಿ ಸೇವಿಸುವುದರ ಲಾಭ ತಿಳಿಯಿರಿ

Grapes

Krishnaveni K

ಬೆಂಗಳೂರು , ಸೋಮವಾರ, 20 ಮೇ 2024 (12:24 IST)
Photo Courtesy: Instagram
ಬೆಂಗಳೂರು: ನಮ್ಮ ಹಿರಿಯರು ಪ್ರತಿನಿತ್ಯ ಒಣದ್ರಾಕ್ಷಿಯನ್ನು ನೆನೆ ಹಾಕಿ ಸೇವಿಸಲು ಸಲಹೆ ನೀಡುತ್ತಿದ್ದರು. ಆರೋಗ್ಯ ತಜ್ಞರೂ ಇದನ್ನೇ ಹೇಳುತ್ತಾರೆ. ಆದರೆ ಇದನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

ಒಣ ದ್ರಾಕ್ಷಿಯಲ್ಲಿ ಕಬ್ಬಿಣದಂಶ ಹೇರಳವಾಗಿದೆ. ಇದು ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗುವ ಅಂಶವಾಗಿದೆ. ಹೀಗಾಗಿ ಒಣದ್ರಾಕ್ಷಿಯನ್ನು ಹೇರಳವಾಗಿ ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ. ಆದರೆ ಅದನ್ನು ಹಾಗೆಯೇ ಸೇವಿಸುವುದಕ್ಕಿಂತ ನೀರಿನಲ್ಲಿ ನೆನೆ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಸಮೇತ ಸೇವಿಸುವುದು ಉತ್ತಮ.

ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ನೀರನ್ನು ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆಗಳು ದೂರವಾಗುತ್ತದೆ. ಅದೇ ರೀತಿ ಈ ಪಾನೀಯವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಕಬ್ಬಿಣದಂಶ ಸೇರ್ಪಡೆಯಾಗುತ್ತದೆ. ಇದರಿಂದ ದೇಹದಲ್ಲಿ ಕಬ್ಬಿಣದಂಶದ ಕೊರತೆ ಬಾರದು ಮತ್ತು ಚರ್ಮವೂ ಹೊಳಪಾಗುತ್ತದೆ.

ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ 8-10 ಒಣದ್ರಾಕ್ಷಿಯನ್ನು ಚೆನ್ನಾಗಿ ತೊಳೆದು ಶುದ್ಧ ನೀರಿನಲ್ಲಿ ನೆನೆ ಹಾಕಿ. ಬೆಳಿಗ್ಗೆ ಇದು ಮತ್ತಷ್ಟು ಮೃದುವಾಗಿರುತ್ತದೆ. ಇದನ್ನು ಚೆನ್ನಾಗಿ ಹಿಚುಕಿಕೊಂಡು ನೀರು ಸಮೇತ ಹಾಗೆಯೇ ಕುಡಿಯಿರಿ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ