Select Your Language

Notifications

webdunia
webdunia
webdunia
webdunia

ವಾರಕ್ಕೆ ಎರಡು ಸೀಬೆಕಾಯಿ ತಿನ್ನುವುದರಿಂದ ಮೂರು ಲಾಭಗಳಿವೆ

Gauva

Krishnaveni K

ಬೆಂಗಳೂರು , ಸೋಮವಾರ, 27 ಮೇ 2024 (09:57 IST)
ಬೆಂಗಳೂರು: ಸೀಬೆಕಾಯಿ ಅಗ್ಗದ ಬೆಲೆಗೆ ಸಿಗುವ ಬಹಳ ಪೋಷಕಾಂಶ ಭರಿತ ಹಣ್ಣಾಗಿದೆ. ಹಣ್ಣನ್ನು ತಿನ್ನುವುದುರಿಂದ ಪ್ರಮುಖವಾಗಿ ನಮಗೆ ಮೂರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅವು ಯಾವುವು ನೋಡೋಣ.

ಸೀಬೆಕಾಯಿಯಲ್ಲಿ ವಿಟಮಿನ್ , ಸಿ, , ಖನಿಜಾಂಶಗಳು, ಸಲ್ಫರ್, ಕಬ್ಬಿಣದಂಶ, ಮ್ಯಾಂಗನೀಸ್, ಸಿಟ್ರಿಕ್ ಅಂಶ, ಕ್ಯಾಲ್ಶಿಯಂ ಅಂಶ ಹೇರಳವಾಗಿದೆ. ಹಲವು ಪೋಷಕಾಂಶಗಳನ್ನು ಹೊಂದಿರುವ ಸೀಬೆಕಾಯಿ ಒಂದು ಸಮೃದ್ಧ ಹಣ್ಣಾಗಿದೆ. ಎಲ್ಲರೂ ಸೇವಿಸಬಹುದಾದ ಅಗ್ಗದ ಹಣ್ಣು.

ವಾರಕ್ಕೆ ಎರಡು ಬಾರಿ ಸೀಬೆಕಾಯಿ ಸೇವಿಸುವುದರಿಂದ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಕಂಡುಬರುವ ಹೊಟ್ಟೆ, ಕಿಬ್ಬೊಟ್ಟೆ, ಸೊಂಟ ನೋವು ಇಲ್ಲವೇ ಕಾಲು ಸೆಳೆತ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ನೀಡಿದಂತಾಗುತ್ತದೆ. ಇದರಲ್ಲಿ ಕ್ಯಾಲ್ಶಿಯಂ ಮತ್ತು ಕಬ್ಬಿಣದಂಶ ಹೇರಳವಾಗಿದ್ದು ಮಹಿಳೆಯರಿಗೆ ಉತ್ತಮ.

ಇನ್ನು ನಿಯಮಿತವಾಗಿ ಸೀಬೆಕಾಯಿ ಸೇವಿಸುವುದರಿಂದ ಅಪಾಯಕಾರಿ ಕ್ಯಾನ್ಸರ್ ರೋಗ ಬಾರದಂತೆ ತಡೆಗಟ್ಟಬಹುದು. ಇದರಲ್ಲಿ ಸಲ್ಫರ್, ಪ್ರತಿರೋಧಕ ಅಂಶಗಳು ಹೇರಳವಾಗಿದ್ದು ಮಾರಣಾಂತಿಕ ಕಾಯಿಲೆ ಬಾರದಂತೆ ನಮ್ಮ ದೇಹವನ್ನು ರಕ್ಷಿಸಿ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

ಸೀಬೆಕಾಯಿಯಲ್ಲಿ ಮೊದಲೇ ಹೇಳಿದಂತೆ ವಿಟಮಿನ್ , ಅಂಶ ಹೇರಳವಾಗಿದೆ. ಹೀಗಾಗಿ ಕಣ್ಣಿನ ಹಲವು ಸಮಸ್ಯೆಗಳಿಗೆ ಸೀಬೆಕಾಯಿ ಸೇವನೆ ಅತ್ಯುತ್ತಮ ಪರಿಹಾರ ನೀಡಬಲ್ಲದು. ದೃಷ್ಟಿ ದೋಷಗಳಿದ್ದವರು ತಪ್ಪದೇ ವಾರಕ್ಕೆ ಎರಡು ಬಾರಿಯಾದರೂ ಸೀಬೆ ಹಣ್ಣು ಸೇವನೆ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ನೆರವು ನೀಡುವ ಕೆಲ ಟಿಪ್ಸ್‌ ಇಲ್ಲಿವೆ