Select Your Language

Notifications

webdunia
webdunia
webdunia
webdunia

ಸರ್ಪ ಸುತ್ತು ವೈರಸ್ ಸೋಂಕಿಗೆ ಇಲ್ಲಿದೆ ಮನೆಮದ್ದು

ಸರ್ಪ ಸುತ್ತು ವೈರಸ್ ಸೋಂಕಿಗೆ ಇಲ್ಲಿದೆ ಮನೆಮದ್ದು
ಬೆಂಗಳೂರು , ಸೋಮವಾರ, 12 ಫೆಬ್ರವರಿ 2018 (07:02 IST)
ಬೆಂಗಳೂರು : ಸರ್ಪ ಸುತ್ತು (herpes-zoster)ಎನ್ನುವುದು ಹಾವಿನ ಶಾಪವಲ್ಲ. ಅದು ಒಂದು ವೈರಸ್ ಸೋಂಕು. ಇದರಿಂದ ಶರೀರದಲ್ಲಿ ನೋವು ಹಾಗು ಉರಿಯಿಂದ ಕೂಡಿರುವ ಚಿಕ್ಕ ಚಿಕ್ಕ ಗುಳ್ಳೆಗಳು ಏಳುತ್ತವೆ. ಹಾಗೇ ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಡುತ್ತದೆ. ಅದನ್ನು ಕೆಲವು ಮನೆಮದ್ದಿನಿಂದ ಹೋಗಲಾಡಿಸಬಹುದು.

  • ಬೇವಿನ ಎಲೆಯ ರಸವನ್ನು ಮೈಗೆಲ್ಲಾ ಹಚ್ಚುವುದರಿಂದ ಈ ಸೋಂಕಿನಿಂದ ಮುಕ್ತಿಹೊಂದಬಹುದು.
  • ಗರಿಕೆಯನ್ನು ಬೇರು ಸಮೇತ ಕಿತ್ತು ಚೆನ್ನಾಗಿ ನೀರಿನಲ್ಲಿತೊಳೆದು ನುಣ್ಣಗೆ ಅರೆದು ಸರ್ಪ ಸುತ್ತು ಇರುವ ಜಾಗಕ್ಕೆ ಹಚ್ಚಬೇಕು.
  • ಗೋಟು ಅಡಿಕೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಸರ್ಪ ಸುತ್ತುಇರುವ ಜಾಗಕ್ಕೆ ದಿನಕ್ಕೆ ಸರ್ಪ ಸುತ್ತುಜಾಗಕ್ಕೆ 4 ಬಾರಿ ಹಚ್ಚಬೇಕು.
  • ಕೆಂಪು ಅಥವಾ ಬಿಳಿ ಅಗಸೆ ಸೊಪ್ಪನ್ನು ತಣ್ಣೀರಿನಲ್ಲಿ ನುಣ್ಣಗೆ ಅರೆದು ಹಚ್ಚಬೇಕು.
  • ನೆಲ್ಲಿ ಪುಡಿ, ಲಾವಂಚ, ಸೊಗದೆ ಬೇರು ಪ್ರತಿಯೊಂದನ್ನು 10-15 ಗ್ರಾಂ ನಷ್ಟು ತೆಗೆದುಕೊಂಡು ಬೇರೆ ಬೇರೆಯಾಗಿ ಪುಡಿ ಮಾಡಿ 8ರಷ್ಟು ನೀರು ಬೇರೆಸಿ ಕುದಿಸಿ ಅದು ಅರ್ಧದಷಗಟು ಆದ ಮೇಲೆ ಇಳಿಸಿ ಆರಿಸಿ ದಿನಕ್ಕೆ 2 ಬಾರಿ ಸೇವಿಸಬೇಕು, 2 ಚಮಚಕ್ಕಿಂತ ಜಾಸ್ತಿ ಸೇವಿಸಬಾರದು.
ಇವುಗಳನ್ನು 21ದಿನ ಮಾಡಬೇಕು. ಈ ಸಮಯದಲ್ಲಿ ಉದ್ದಿನಕಾಳು, ಹುರುಳಿಕಾಳು , ಈರುಳ್ಳಿ, ಬೆಳ್ಳುಳ್ಳಿ, ಜಿಡ್ಡು ಪದಾರ್ಥ, ಬೆಲ್ಲ, ಸಿಹಿ ಪದಾರ್ಥ ಹಾಗು ಹಗಲು ನಿದ್ದೆ ಮಾಡಬಾರದು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರೇ ನಿಮ್ಮ ಋತುಚಕ್ರ ಅಸಮರ್ಪಕವಾಗಿರುವುದಕ್ಕೆ ಇದು ಕೂಡ ಕಾರಣವಂತೆ!