Select Your Language

Notifications

webdunia
webdunia
webdunia
webdunia

ಹಲ್ಲುಗಳು ಹುಳುಕು ಹಿಡಿಯುವುದನ್ನು ತಡೆಯಲು ಈ ವಿಧಾನ ಪಾಲಿಸಿ

ಹಲ್ಲುಗಳು ಹುಳುಕು ಹಿಡಿಯುವುದನ್ನು ತಡೆಯಲು ಈ ವಿಧಾನ ಪಾಲಿಸಿ
ಬೆಂಗಳೂರು , ಶುಕ್ರವಾರ, 9 ಫೆಬ್ರವರಿ 2018 (07:43 IST)
ಬೆಂಗಳೂರು : ಹಲ್ಲುಗಳು ಒಬ್ಬ ವ್ಯಕ್ತಿಯ ಆರೋಗ್ಯ , ವ್ಯಕ್ತಿತ್ವ , ಸೌಂದರ್ಯ ವನ್ನು ಸೂಚಿಸುತ್ತದೆ. ಹೀಗಿರುವಾಗ ನಾವು ನಮ್ಮ ಹಲ್ಲುಗಳನ್ನು ಹೇಗೆ ರಕ್ಷಿಸಬೇಕು ಎಂದು ತಿಳಿದುಕೊಳ್ಳಬೇಕು. ಹಲ್ಲಿನ ಬಗ್ಗೆ ಕೇರ್ ತೆಗೆದುಕೊಳ್ಳದಿದ್ದರೆ ಹುಳುಕು ಹಲ್ಲು ಉಂಟಾಗಿ, ಹಲ್ಲು ನೋವು, ವಸಡಿನಲ್ಲಿ ರಕ್ತ ಬರುವುದು, ಬಾಯಿ ದುರ್ವಾಸನೆ ಉಂಟಾಗುವುದು.

 
 ಹಲ್ಲುಗಳ ಸುರಕ್ಷತೆಗೆ ಸರಿಯಾದ ವಿಧಾನದಲ್ಲಿ ಹಲ್ಲು ಉಜ್ಜಬೇಕು.ದಿನಕ್ಕೆ ಎರಡು ಬಾರಿ ಬ್ರೆಷ್ ಮಾಡಬೇಕು ,ಆರು ತಿಂಗಳಿಗೆ ಒಮ್ಮೆ ಟೂತ್ ಬ್ರಷ್ ಬದಲಿಸಿ. ವಯಸ್ಸಾದಂತೆ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ ಆಗ ದಂತ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದು ಹಲ್ಲುಗಳನ್ನು ಸ್ವಚ್ಚಗೊಳಿಸಿ.


ಲಾಲಿ ಪಪ್, ಐಸ್ ಕ್ಯಾಂಡಿ, ಫ್ರೆಂಚ್ ಫ್ರೈ, ಕೆಮ್ಮಿನ ಸಿರಪ್ , ಮಿಂಟ್ -ಕುಕ್ಕೀಸ್ ಇವುಗಳಲ್ಲಿ ಹೆಚ್ಚಿನ ಸಕ್ಕರೆ ಅಂಶವಿರುವುದರಿಂದ ಹಲ್ಲುಗಳು ಹಾಳಾಗುತ್ತವೆ. ಆದ್ದರಿಂದ ಇವುಗಳನ್ನು ಸೇವಿಸಿದ ನಂತರ ಬಾಯಿಯನ್ನು ಸ್ವಲ್ಪ ಕಾದ ಬಿಸಿ ನೀರು ಹಾಕಿ ಮುಕ್ಕಳಿಸಿ. ಆದಷ್ಟು ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿದರೆ ಹಲ್ಲುಗಳು ಆರೋಗ್ಯವಾಗಿರುತ್ತದೆ.


ನಟ್ಸ್, ಹಾಲು, ಮೀನು,ಚಿಕ್ಕನ್ ಇವುಗಳಲ್ಲಿರುವ ಕ್ಯಾಲ್ಸಿಯಂ ಹಲ್ಲುಗಳನ್ನು ಗಟ್ಟಿಯಾಗಿಸುತ್ತದೆ. ಸೇಬು ಮತ್ತು ತರಕಾರಿಗಳ ಸೇವನೆ ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದು. ಸಿಟ್ರಸ್ ಆಹಾರ, ಟೊಮೆಟೊ ಸೇವನೆ ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೂರ್ಛೆರೋಗಕ್ಕೆ ಇಲ್ಲಿದೆ ಮನೆಮದ್ದು!