Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಮನಿಪ್ಲಾಂಟ್ ಅನ್ನು ಎಲ್ಲಿ ಬೆಳೆಸಿದರೆ ಶುಭ ಗೊತ್ತಾ...?

ಮನೆಯಲ್ಲಿ ಮನಿಪ್ಲಾಂಟ್ ಅನ್ನು ಎಲ್ಲಿ ಬೆಳೆಸಿದರೆ ಶುಭ ಗೊತ್ತಾ...?
ಬೆಂಗಳೂರು , ಗುರುವಾರ, 8 ಫೆಬ್ರವರಿ 2018 (07:39 IST)
ಬೆಂಗಳೂರು : ಮನೆಯಲ್ಲಿ ಆರ್ಥಿಕ ವೃದ್ಧಿಯಾಗಬೇಕೆನ್ನುವ ಉದ್ದೇಶದಿಂದ ಅನೇಕರು ಮನೆಯಲ್ಲಿ ಮನಿ ಪ್ಲಾಂಟ್ ಇಟ್ಟುಕೊಳ್ತಾರೆ. ಕೆಲವರು ಮನೆಯೊಳಗೆ ಮನಿ ಪ್ಲಾಂಟ್ ಇಟ್ಟರೆ ಮತ್ತೆ ಕೆಲವರು ಮನೆ ಹೊರಗಿಡ್ತಾರೆ. ಆದ್ರೆ ಇದ್ರ ಬಗ್ಗೆ ಸರಿಯಾಗಿ ತಿಳಿದಿರದ ಕಾರಣ ಮನೆಯಲ್ಲಿ ಮನಿ ಪ್ಲಾಂಟ್ ಇಟ್ಟರೂ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ. ಸರಿಯಾದ ದಿಕ್ಕು ಹಾಗೂ ವಾಸ್ತುವನ್ನು ಗಮನದಲ್ಲಿಟ್ಟುಕೊಂಡು ಮನೆಯಲ್ಲಿ ಮನಿ ಪ್ಲಾಂಟ್ ಇಡಬೇಕು.


ಮನಿ ಪ್ಲಾಂಟ್ ಸರಿಯಾದ ದಿಕ್ಕಿನಲ್ಲಿಡಬೇಕು. ಈಶಾನ್ಯ ದಿಕ್ಕಿನಲ್ಲಿ ಮನಿಪ್ಲಾಂಟ್ ಇಟ್ಟರೆ ಶುಭ ಫಲಗಳನ್ನು ಪಡೆಯಬಹುದು. ಧನದ ವೃದ್ಧಿಯಾಗುತ್ತದೆ. ದಿಕ್ಕು ಬದಲಾದಲ್ಲಿ ಮನೆಯ ಸದಸ್ಯರ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ.
ಮನಿ ಪ್ಲಾಂಟ್ ಸರಿಯಾಗಿ ಬೆಳೆಯದಿದ್ದರೆ ಅದನ್ನು ಹೊರಗೆ ಎಸೆಯುತ್ತಾರೆ. ಆದ್ರೆ ಹೀಗೆ ಮಾಡುವುದು ಅಶುಭ. ಮನಿಪ್ಲಾಂಟ್ ಸರಿಯಾಗಿ ಬೆಳವಣಿಗೆಯಾಗದಿದ್ದಲ್ಲಿ ದೊಡ್ಡ ಪಾಟ್ ನಲ್ಲಿ ಇದನ್ನು ಬೆಳೆಸಬೇಕು. ಮನೆಯಿಂದ ಹೊರಗೆ ಎಸೆಯಬಾರದು.
ಮನೆಯಿಂದ ಹೊರಗೆ ಮನಿ ಪ್ಲಾಂಟ್ ಇಡುವುದಕ್ಕಿಂತ ಮನೆಯೊಳಗೆ ಇಡುವುದು ಶುಭ. ಮಡಿಕೆ ಅಥವಾ ಬಾಟಲಿಯಲ್ಲಿಯೂ ಮನಿ ಪ್ಲಾಂಟ್ ಬೆಳೆಸಬಹುದು.


ಹಾಳಾದ ಮನಿ ಪ್ಲಾಂಟ್ ಎಲೆಗಳನ್ನು ಎಸೆಯಬೇಕು. ಮನಿ ಪ್ಲಾಂಟ್ ಎಲೆಗಳು ಮನೆಯೊಳಗೆ ಉದುರಿ ಬೀಳುವುದು ಅಶುಭ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶನಿದೋಷವಿರುವವರು ಈ ವಸ್ತುಗಳನ್ನು ಜೇಬಿನಲ್ಲಿಟ್ಟುಕೊಂಡರೆ ಒಳ್ಳೆಯದಂತೆ!