ಬೆಂಗಳೂರು : ಹೌದು. ಮಲಿನಗೊಂಡಿರುವ ವಾಯುವನ್ನು ಉಸಿರಾಡಿದರೆ ಟೀನೇಜ್ ಹುಡುಗಿಯರಲ್ಲಿ ಇರೆಗ್ಯುಲರ್ ಮೆನ್‌ಸ್ಟ್ರುವಲ್ ಸಮಸ್ಯೆ ಕಂಡು ಬರುತ್ತದೆ ಎಂದು ಒಂದು ಸಂಶೋಧನೆಯೊಂದು ಇತ್ತೀಚಿಗೆ ತಿಳಿಸಿದೆ. ಅಷ್ಟೇ ಅಲ್ಲ ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಅಂಧರೆ ಇನ್‌ಫರ್ಟಿಲಿಟಿ, ಮೆಟಬಾಲಿಕ್ ಸಿಂಡ್ರೋಮ್ ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಾಡುತ್ತದೆ.
ಸಂಶೋಧನೆಯೊಂದರ ಪ್ರಕಾರ 14 ರಿಂದ 18 ವರ್ಷದೊಳಗಿನ ಹುಡುಗಿಯರು ಮಾಲಿನ್ಯಗೊಂಡ ವಾಯುವನ್ನು ಉಸಿರಾಡಿದರೆ ಇದರಿಂದ ಋತುಚಕ್ರ ಇರ್ರೆಗ್ಯುಲರ್ ಆಗುತ್ತದೆ. ಮಾಲಿನ್ಯದಲ್ಲಿರುವ ಕೆಲವೊಂದು ಅಂಶಗಳು ಹಾರ್ಮೋನಲ್ ಸಮಸ್ಯೆಯನ್ನು ಉಂಟು ಮಾಡುತ್ತದೆ. ಒಂದು ಬಾರಿ ಹಾರ್ಮೋನ್ ಬದಲಾವಣೆ ಕಂಡುಬಂದರೆ ಇದರಿಂದ ಋತುಚಕ್ರ ಅಸಮರ್ಪಕವಾಗುತ್ತದೆ.
ವಾಯು ಮಾಲಿನ್ಯದಿಂದ ಮಾತ್ರವಲ್ಲ ಹೆಚ್ಚಾದ ತೂಕ, ತಪ್ಪಾದ ಆಹಾರ ಕ್ರಮ, ಸರಿಯಾದ ಶಾರೀರಿಕ ವ್ಯಾಯಾಮ ಮಾಡದೆ ಇದ್ದರೆ ಹಾಗೂ ಲೈಫ್‌ಸ್ಟೈಲ್ ಚೆನ್ನಾಗಿ ಇರದೆ ಇದ್ದರೆ ಆವಾಗಲೂ ಪಿರಿಯಡ್ಸ್ ಲೇಟ್ ಆಗಿ ಆಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ