Webdunia - Bharat's app for daily news and videos

Install App

ಸೌಂದರ್ಯಕ್ಕೂ ಸೈ, ಆರೋಗ್ಯಕ್ಕೂ ಸೈ..!

Webdunia
ಸೋಮವಾರ, 8 ಆಗಸ್ಟ್ 2022 (14:48 IST)
ಅರಶಿನ ಇಡೀ ದೇಹಕ್ಕೆ ಉತ್ತಮ ಔಷಧಿ. ಹಸಿ ಮತ್ತು ಪುಡಿ ಮಾಡಿದ ಅರಶಿನ ಸರ್ವರೋಗಕ್ಕೂ ಪರಿಹಾರಕವಾಗಿದೆ.

ಬರೀ ಅಡುಗೆಮನೆಯಲ್ಲಿ ಮಾತ್ರ ಇದರ ಬಳಕೆಯಲ್ಲ. ಬದಲಾಗಿ ನಮ್ಮ ಪ್ರತೀ ಚಟುವಟಿಕೆಯಲ್ಲೂ ಇದು ಬೇಕಾಗಿದೆ.

ಸುಟ್ಟ ಗಾಯಗಳಿಂದ ನಮ್ಮ ದೇಹವನ್ನು ಅರಶಿನ ಕಾಪಾಡುತ್ತದೆ. ಗಾಯಗಳಿಗೆ ಅರಶಿನ ಲೇಪಿಸಿದರೆ ಬೇಗ ವಾಸಿಯಾಗುತ್ತದೆ. ಗಾಯದ ಕಲೆ ಕೂಡ ಶೀಘ್ರದಲ್ಲಿ ಮಾಯವಾಗುತ್ತದೆ.

ಮುಖದ ಸೌಂದರ್ಯಕ್ಕೂ ಅರಶಿನದ ಕೊಡುಗೆ ಅಪಾರ. ಮುಖಕ್ಕೆ ಕಾಂತಿ ಬರಬೇಕಾದರೆ ಅರಶಿನ ಹಚ್ಚುತ್ತಾರೆ. ಪೂಜೆಯ ದಿನ, ಮದುವೆಯ ಹಿಂದಿನ ಅರಶಿನ ಹಚ್ಚುತ್ತಾರೆ.


ಶುಭ ಸಮಾರಂಭಗಳಲ್ಲಿ ಅರಶಿನವಿಲ್ಲದೆ ಕಾರ್ಯ ನಡೆಯುವುದೇ ಇಲ್ಲ ಎಂದೇ ಹೇಳಬಹುದು. ಮದುವೆಯ ಹಿಂದಿನ ದಿನ ಅರಶಿನ ಶಾಸ್ತ್ರ ಅಂತಾನೇ ನಡೆಯುತ್ತೆ. ಮದುಮಗಳಿಗೆ ಕಾಂತಿ ಬರಲಿ ಎಂದು ಅರಶಿನ ನೀರನ್ನು ಸುರಿಯುತ್ತಾರೆ.

ಅಡುಗೆಯಲ್ಲಿ ಪ್ರಮುಖವಾಗಿ ಅರಶಿನ ಇರಲೇಬೇಕು. ಅರಶಿನ ರೋಗನಿರೋಧಕ ಶಕ್ತಿ ಹೆಚ್ಚಿಸೋದರಲ್ಲಿ ಹೆಚ್ಚು ಪಾತ್ರ ವಹಿಸುತ್ತದೆ. ಮಳೆಗಾಲವಾದ್ದರಿಂದ ಅಡುಗೆಯಲ್ಲಿ ಹೆಚ್ಚು ಬಳಸಿ.

ಸುಟ್ಟ ನೋವುಗಳಿಂದ ನಮ್ಮನ್ನು ರಕ್ಷಿಸುವ ಅರಶಿನ ನೈಸರ್ಗಿಕ ಆಂಟಿಸೆಪ್ಟಿಕ್ ಮತ್ತು ಬ್ಯಾಕ್ಟಿರಿಯಾ ವಿರೋಧಿ ಅಂಶವಾಗಿದೆ. ಜಠರವನ್ನು ಕೂಡ ನೈಸರ್ಗಿವಾಗಿ ಶುದ್ಧ ಮಾಡುವಲ್ಲಿ ಅರಶಿನದ ಪಾತ್ರ ದೊಡ್ಡದು.

ಮೆದುಳನ್ನು ಆರೋಗ್ಯವಾಗಿ ಇರಿಸುವುದರಲ್ಲೂ ಅರಶಿನ ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾನ್ಸರ್ ನ್ನು ಕೂಡ ಪ್ರಾಥಮಿಕವಾಗಿ ಅರಶಿನ ದೂರವಿಡುತ್ತದೆ.
ಅರಶಿನ ಕೊಬ್ಬನ್ನು ಕರಗಿಸುವ ಗುಣವನ್ನು ಹೊಂದಿದ್ದು ತೂಕ ನಿಯಂತ್ರಣಕ್ಕೆ ಸಹಕಾರಿ. ಖಿನ್ನತೆಯ ಚಿಕಿತ್ಸೆಗಾಗಿ ಚೀನಾದಲ್ಲಿ ಅರಶಿನವನ್ನು ಬಳಸಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments