Webdunia - Bharat's app for daily news and videos

Install App

ಸಂಡೇ ಸ್ಪೆಷಲ್ : ‘ಚಿಕನ್ ಕಾಲು ಸೂಪ್’ ಮಾಡಿ ಸವಿಯಿರಿ

Webdunia
ಭಾನುವಾರ, 7 ಆಗಸ್ಟ್ 2022 (11:43 IST)
ಇಂದು ಎಲ್ಲ ನಾನ್ವೆಜ್ ಪ್ರಿಯರ ಇಷ್ಟವಾದ ಫುಡ್ ಚಿಕನ್ ಕಾಲಿನಿಂದ ಹೇಗೆ ಸೂಪ್ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ.

ಇದು ಕೀಲುಗಳ ನೋವುಗಳಿಗೂ ರಾಮಬಾಣದ ರೀತಿ ಕೆಲಸ ಮಾಡುತ್ತೆ. ನೀವು ನಿಮ್ಮ ಮನೆಯಲ್ಲಿ ಈ ಆರೋಗ್ಯಕರವಾದ ಮತ್ತು ರುಚಿಕಾರದವಾದ ಟೇಸ್ಟಿ ಸೂಪ್ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದೇವೆ.

ಬೇಕಾಗಿರುವ ಪದಾರ್ಥಗಳು

* ಚಿಕನ್ ಕಾಲುಗಳು – 8
* ಕಟ್ ಮಾಡಿದ ಈರುಳ್ಳಿ – 2 ಕಪ್
* ಕಟ್ ಮಾಡಿದ ಟೊಮೆಟೊ – 1 ಕಪ್
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1/2 ಟೀಸ್ಪೂನ್
* ಗರಂ ಮಸಾಲ ಪುಡಿ – 1/2 ಟೀಸ್ಪೂನ್
* ಏಲಕ್ಕಿ – 2
* ಅರಿಶಿನ – 1/2 ಟೀಸ್ಪೂನ್
* ಕರಿಮೆಣಸು – 1 ಟೀಸ್ಪೂನ್
* ಎಣ್ಣೆ – 2 ಟೀಸ್ಪೂನ್
* ಹಸಿರು ಮೆಣಸಿನಕಾಯಿ – 2
* ಮೆಣಸಿನ ಪುಡಿ – 1 ಟೀಸ್ಪೂನ್
* ಕೊತ್ತಂಬರಿ ಸೊಪ್ಪು – 1 ಕಪ್
* ಹುರಿಗಡಲೆ – 1ವರೆ ಟೀಸ್ಪೂನ್
* ತೆಂಗಿನ ಕಾಯಿ ತುರಿ – 2 ಟೀಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಅಗತ್ಯವಿರುವಷ್ಟು ನೀರು

ಮಾಡುವ ವಿಧಾನ

* ಚಿಕನ್ ಕಾಲನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪ್ರೆಶರ್ ಕುಕ್ಕರ್ಗೆ ಹಾಕಿ ಅದಕ್ಕೆ ಅರಿಶಿನ ಪುಡಿ, ಏಲಕ್ಕಿ, ಉಪ್ಪು ಮತ್ತು ಕರಿಮೆಣಸನ್ನು ಸೇರಿಸಿ. 5 ಕಪ್ ನೀರು ಸುರಿಯಿರಿ. ಈ ಮಿಶ್ರಣವನ್ನು ಸುಮಾರು 10 ನಿಮಿಷಗಳ ಕಾಲ ಕುಕ್ಕರ್ನಲ್ಲಿ ಬೇಯಿಸಿ.
* ಹುರಿಗಡಲೆ ಮತ್ತು ತುರಿದ ತೆಂಗಿನಕಾಯಿ ಎರಡನ್ನೂ ಒಟ್ಟಿಗೆ ಪುಡಿ ಮಾಡಿ. ಅವುಗಳ ನಯವಾದ ಪೇಸ್ಟ್ ತಯಾರಿಸಿ.
* ಪ್ಯಾನ್ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಸೇರಿಸಿ. ಈರುಳ್ಳಿಯನ್ನು ಸ್ವಲ್ಪ ಬೇಯಿಸಿ.

* ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಬೆರೆಸಿ. ಮಿಶ್ರಣವನ್ನು 30 ಸೆಕೆಂಡುಗಳ ಕಾಲ ಹುರಿಯಿರಿ.
* ಟೊಮಾಟೊ, ಮೆಣಸಿನ ಪುಡಿ ಮತ್ತು ತೆಂಗಿನಕಾಯಿ-ಹುರಿಗಡಲೆ ಪೇಸ್ಟ್ ಅನ್ನು ಹಾಕಿ ಎಣ್ಣೆ ಬಿಡುವವರೆಗೂ ಫ್ರೈ ಮಾಡಿ.

* ಈಗ, ಪ್ರೆಶರ್ ಕುಕ್ಕರ್ ತೆರೆಯಿರಿ, ಅದಕ್ಕೆ ಸಿದ್ಧವಾದ ಮಸಾಲಾ ಜೊತೆ ಗರಂ ಮಸಾಲ ಪುಡಿ ಹಾಕಿ. ಇದರ ನಂತರ, ಮತ್ತೆ ಮಿಶ್ರಣವನ್ನು ಸುಮಾರು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ.
* ಕುಕ್ಕರ್ ತಣ್ಣಗಾದ ನಂತರ ಕೊನೆಯದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments