Select Your Language

Notifications

webdunia
webdunia
webdunia
webdunia

ಹೊಸ ರೀತಿಯ ‘ಚಿಕನ್ ಫ್ರೈಡ್ ರೈಸ್’ ಒಮ್ಮೆ ಟ್ರೈ ಮಾಡಿ

ಅಡುಗೆ
‘ಚಿಕನ್ ಫ್ರೈಡ್ ರೈಸ್’ ಎನ್ನುವ ರೆಸಿಪಿ ಇದೆ ಎಂದು ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ.
 
ಅದಕ್ಕೆ ಇಂದು ನಿಮ್ಮ ಮನೆಯಲ್ಲಿಯೇ ಸಿಂಪಲ್ ಆಗಿ ಹೇಗೆ ಈ ರೆಸಿಪಿ ಟ್ರೈ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ.

ಬೇಕಾಗಿರುವ ಪದಾರ್ಥಗಳು

* ಆಲಿವ್ ಎಣ್ಣೆ – 2 ಟೀಸ್ಪೂನ್
* ಕಟ್ ಮಾಡಿದ ಚಿಕನ್ – 2 ಕಪ್
* ಕರಿಮೆಣಸು – 2 ಟೀಸ್ಪೂನ್
* ಎಳ್ಳಿನ ಎಣ್ಣೆ – 2 ಟೀಸ್ಪೂನ್
* ಕಟ್ ಮಾಡಿದ ಈರುಳ್ಳಿ – 1 ಕಪ್
* ಕಟ್ ಮಾಡಿದ ಕ್ಯಾರೆಟ್ – ಅರ್ಧ ಕಪ್

* ಲವಂಗ – 1 ಟೀಸ್ಪೂನ್
* ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
* ಬೇಯಿಸಿದ ಅಕ್ಕಿ – 3 ಕಪ್
* ನೆನೆಸಿಟ್ಟ ಬಟಾಣಿ – ಅರ್ಧ ಕಪ್
* ಮೊಟ್ಟೆಗಳು – 2
* ಸೋಯಾ ಸಾಸ್ – 3 ಟೀಸ್ಪೂನ್

ಮಾಡುವ ವಿಧಾನ

* ಮಧ್ಯಮ ಉರಿಯಲ್ಲಿ ಒಂದು ಬಾಣಲೆಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ. ಚಿಕನ್ ಹಾಕಿ ಚೆನ್ನಾಗಿ ಫ್ರೈ ಮಾಡಿ. ಅದಕ್ಕೆ ಉಪ್ಪು ಮತ್ತು ಮೆಣಸಿನಕಾಯಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೂ ಉರಿಯಿರಿ.
* ಚಿಕನ್ ಬಾಣಲೆಯಿಂದ ತೆಗೆದು 5 ನಿಮಿಷಗಳ ಕಾಲ ಬಿಡಿ.
* ಅದೇ ಬಾಣಲೆಗೆ ಎಳ್ಳಿನ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಈರುಳ್ಳಿ ಮತ್ತು ಕ್ಯಾರೆಟ್ ಸೇರಿಸಿ 5 ನಿಮಿಷಗಳು ಬೇಯಿಸಿ.
* ನಂತರ ಅದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಸೇರಿಸಿ 1 ನಿಮಿಷ ಬಿಡಿ. ಅನ್ನ ಮತ್ತು ಬಟಾಣಿಗಳನ್ನು ಬೆರೆಸಿ 2 ನಿಮಿಷ ಫ್ರೈ ಮಾಡಿ.
* ಇನ್ನೊಂದು ಪಾತ್ರೆಯಲ್ಲಿ ಮೊಟ್ಟೆಯನ್ನು ಬೇಯಿಸಿ. ನಂತರ ಮೊಟ್ಟೆಯನ್ನು ಕಟ್ ಮಾಡಿ ರೈಸ್ ಜೊತೆ ಮಿಕ್ಸ್ ಮಾಡಿ.
* ಅದಕ್ಕೆ ಸೋಯಾ ಸಾಸ್ ಮತ್ತು ಹಸಿರು ಈರುಳ್ಳಿ ಹಾಕಿ ಸರಿಯಾಗಿ ಫ್ರೈ ಮಾಡಿ.


Share this Story:

Follow Webdunia kannada

ಮುಂದಿನ ಸುದ್ದಿ

‘ಬೋನ್ ಲೆಸ್ ಮಟನ್ ಫ್ರೈ’ ಸಿಂಪಲ್ ಟ್ರಿಕ್ಸ್