Select Your Language

Notifications

webdunia
webdunia
webdunia
webdunia

ರುಚಿಕರವಾದ ಗರಿ-ಗರಿ ಮಟನ್ ಕೈಮಾ ವಡಾ

ರುಚಿಕರವಾದ ಗರಿ-ಗರಿ ಮಟನ್ ಕೈಮಾ ವಡಾ
ಬೆಂಗಳೂರು , ಭಾನುವಾರ, 26 ಜೂನ್ 2022 (13:13 IST)
ಇಂದು ನಾನ್ವೆಜ್ ಪ್ರಿಯರಿಗೆ ತುಂಬಾ ಇಷ್ಟವಾಗುವಂತಹ ರೆಸಿಪಿ.

ಊಟದ ಜೊತೆಗೆ ಏನಾದರೂ ಗರಿಗರಿಯಾಗಿ ಕುರುಕುಲು ತಿಂಡಿ ತಿನ್ನಬೇಕು ಎಂದು ಆಸೆ ಆಗುತ್ತಿರುತ್ತೆ.

ಅದಕ್ಕೆ ನಾವು ಸಿಂಪಲ್ ಮತ್ತು ಗರಿಗರಿಯಾಗಿ ಹೇಗೆ ‘ಮಟನ್ ಕೀಮಾ ವಡಾ’ ಮಾಡುವುದು ಎಂದು ಹೇಳಿಕೊಡುತ್ತೇವೆ.

ಬೇಕಾಗಿರುವ ಪದಾರ್ಥಗಳು

* ಕಟ್ ಮಾಡಿದ ಮಟನ್ – 500 ಗ್ರಾಂ
* ಸಣ್ಣದಾಗಿ ಕಟ್ ಮಾಡಿದ ಈರುಳ್ಳಿ – 1 ಕಪ್
* ಬೆಳ್ಳುಳ್ಳಿ – 10 ರಿಂದ 12
* ಶುಂಠಿ – 1/2 ಇಂಚು
* ಲವಂಗ – 4
* ದಾಲ್ಚಿನ್ನಿ – 2
* ಕಾಳುಮೆಣಸು – 1/2 ಟೀಸ್ಪೂನ್
* ಹಸಿರು ಮೆಣಸಿನಕಾಯಿಗಳು – 3-4

* ಉಪ್ಪು – 1 ಟೀಸ್ಪೂನ್
* ಕಡ್ಕೆ ಹಿಟ್ಟು – 1/4 ಕಪ್
* ಬೇಯಿಸಿದ ಮೊಟ್ಟೆ – 1
* ಕೊತ್ತಂಬರಿ ಸೊಪ್ಪು – ಅರ್ಧ ಕಪ್
* ಪುದೀನಾ – 10 ರಿಂದ 15 ಎಲೆ
* ಸಬ್ಬಸಿಗೆ ಸೊಪ್ಪು – 1 ಕಪ್
* ಅಡುಗೆ ಸೋಡಾ – 1 ಪಿಂಚ್
* ಡೀಪ್ ಫ್ರೈ ಮಾಡಲು ಎಣ್ಣೆ – 2 ಕಪ್

ಮಾಡುವ ವಿಧಾನಗಳು

* ಮಿಕ್ಸರ್ ಜಾರ್ ತೆಗೆದುಕೊಂಡು ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಲವಂಗ, ದಾಲ್ಚಿನ್ನಿ, ಕಾಳುಮೆಣಸು, ಹಸಿರು ಮೆಣಸಿನಕಾಯಿಗಳು, ಉಪ್ಪು ಮತ್ತು ನೀರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.
* ಈ ಪೇಸ್ಟ್ಗೆ ಕಟ್ ಮಾಡಿದ ಮಟನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಹದವಾದ ಮಿಶ್ರಣವನ್ನು ಒಂದು ಬೌಲ್ಗೆ ವರ್ಗಾಯಿಸಿ, ಮೊಟ್ಟೆಯನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಕಟ್ ಮಾಡಿದ ಕೊತ್ತಂಬರಿ ಸೊಪ್ಪು, ಪುದೀನಾ, ಸಬ್ಬಸಿಗೆ ಸೊಪ್ಪು ಮತ್ತು ಈರುಳ್ಳಿ ಸೇರಿಸಿ, ಅಗತ್ಯವಿದ್ದರೆ ಸ್ವಲ್ಪ ಉಪ್ಪು ಮತ್ತು ಅಡುಗೆ ಸೋಡಾ ಸೇರಿಸಿ ಮತ್ತೆ ಸರಿಯಾಗಿ ಮಿಶ್ರಣ ಮಾಡಿ.
* ಡೀಪ್ ಫ್ರೈ ಮಾಡಲು ಎಣ್ಣೆಯನ್ನು ಬಿಸಿ ಮಾಡಿ. ಅದು ಬಿಸಿಯಾದ ನಂತರ ಮಟನ್ ಮಿಶ್ರಣವನ್ನು ವಡಾ ಆಕಾರಕ್ಕೆ ಚಪ್ಪಟೆ ಮಾಡಿ.
* ಎಣ್ಣೆ ಬಿಸಿಯಾದ ನಂತರ ಮಧ್ಯಮ ಉರಿಯಲ್ಲಿ ಒಮ್ಮೆಗೆ 4 ರಿಂದ 5 ವಡಾ ಹಾಕಿ ಡೀಪ್ ಫ್ರೈ ಮಾಡಿ.
* ಈ ಮಿಶ್ರಣವು ಗೋಲ್ಡನ್ ಬ್ರಾನ್ ಬರುವವರೆಗೂ ಎರಡೂ ಬದಿಗಳಿಗೆ ಗರಿಗರಿಯಾಗುವವರೆಗೆ ಫ್ರೈ ಮಾಡಿ.
* ಹೆಚ್ಚಿನ ಎಣ್ಣೆಯನ್ನು ಹೀರಿಕೊಳ್ಳಲು ಟೀಶ್ಯೂ ಮೇಲೆ ವಡಾಗಳನ್ನು ಹಾಕಿ.


Share this Story:

Follow Webdunia kannada

ಮುಂದಿನ ಸುದ್ದಿ

ತುಳಸಿ ಬೀಜ ತಿನ್ನೋದ್ರಿಂದ ಒತ್ತಡ ಕಡಿಮೆಯಾಗುತ್ತೆ! ಒಮ್ಮೆ ಟ್ರೈ ಮಾಡಿ