Select Your Language

Notifications

webdunia
webdunia
webdunia
webdunia

ಅಡುಗೆ ಎಣ್ಣೆಯಲ್ಲಿ 10- 12 ರೂಪಾಯಿ ಇಳಿಕೆಯಾಗುವ ಸಾಧ್ಯತೆ..!

Cooking oil is likely to decrease by Rs 10-12
bangalore , ಶನಿವಾರ, 6 ಆಗಸ್ಟ್ 2022 (19:24 IST)
ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇಲ್ಲೊಂದು ಶುಭ ಸುದ್ದಿ ಇದೆ. ಶೀಘ್ರದಲ್ಲೇ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಿತ್ತು. ಈಗ ಮತ್ತಷ್ಟು ಇಳಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ. ಜಾಗತಿಕವಾಗಿ ಬೆಲೆ ಕಡಿಮೆಯಾಗಿರುವ ಕಾರಣ ಅಡುಗೆ ಎಣ್ಣೆ ಬೆಲೆಯನ್ನು ಮತ್ತೆ ರೂ. 10 - 12 ರಷ್ಟು ಇಳಿಕೆ ಮಾಡಲು ಅಡುಗೆ ಎಣ್ಣೆಯ ತಯಾರಕರು  ಒಪ್ಪಿಕೊಂಡಿದ್ದಾರೆ. ಈಗಾಗಲೇ ಒಮ್ಮೆ ಅಡುಗೆ ಎಣ್ಣೆಯ ತಯಾರಕರು ಬೆಲೆ ಕಡಿಮೆ ಮಾಡಿದ್ದರೂ ಜಾಗತಿಕ ಬೆಲೆ ಕಡಿಮೆಯಾಗಿರುವ ಹಿನ್ನೆಲೆ ಮತ್ತಷ್ಟು ಬೆಲೆ ಇಳಿಕೆ ಮಾಡುವ ಅವಕಾಶವಿದೆ ಎಂದು ಸಚಿವಾಲಯ ಅಭಿಪ್ರಾಯ ಪಟ್ಟಿರುವ ಬಗ್ಗೆಯೂ ಆ ಅಧಿಕಾರಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ 10 ಲಕ್ಷ ರಾಷ್ಟ್ರಧ್ವಜ ನಾಹರೀಕರಿಗೆ ವಿತರಿಸಲು ಸಿದ್ಧತೆ