Select Your Language

Notifications

webdunia
webdunia
webdunia
webdunia

ಕೇಸರಿ ಕ್ಯಾನ್ಸರ್ ಕಂಟ್ರೋಲ್ ಮಾಡುವ ಬೆಸ್ಟ್ ಮದ್ದು!

ಕೇಸರಿ ಕ್ಯಾನ್ಸರ್ ಕಂಟ್ರೋಲ್ ಮಾಡುವ ಬೆಸ್ಟ್ ಮದ್ದು!
ಮೈಸೂರು , ಗುರುವಾರ, 11 ನವೆಂಬರ್ 2021 (12:52 IST)
ದುಬಾರಿ ಹೂವು ಎಂದೇ ಪರಿಗಣಿಸಲಾಗಿರುವ ಕೇಸರಿಯನ್ನು ವಿವಿಧ ಬಗೆಯ ಖಾದ್ಯಗಳು ಹಾಗೂ ಪಾನೀಯಗಳಲ್ಲಿ ಬಳಕೆ ಮಾಡುತ್ತೇವೆ.
ಇದನ್ನು ಸೇವನೆ ಮಾಡಿದರೆ, ಅದರಿಂದ ಹಲವಾರು ಬಗೆಯ ಆರೋಗ್ಯ ಲಾಭಗಳು ದೇಹಕ್ಕೆ ಸಿಗುವುದು. ರುಚಿ, ಬಣ್ಣ ಹಾಗೂ ಸುವಾಸನೆ ನೀಡುವಂತಹ ಕೇಸರಿಯು ಹಲವಾರು ಬಗೆಯ ಔಷಧೀಯ ಗುಣಗಳನ್ನು ಹೊಂದಿದೆ.
ಇದು ಕ್ಯಾನ್ಸರ್ ವಿರುದ್ಧ ಹೋರಾಡುವುದು ಮಾತ್ರವಲ್ಲದೆ, ಕೆಲವೊಂದು ದೀರ್ಘಕಾಲಿಕ ಅನಾರೋಗ್ಯಗಳನ್ನು ದೂರವಿಡುವುದು. ಆಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಇದು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು.
ಇದರಿಂದ ಕ್ಯಾನ್ಸರ್ ಬರುವ ಅಪಾಯವು ತುಂಬಾ ಕಡಿಮೆ ಆಗುವುದು. ಇದರ ಹೊರತಾಗಿಯೂ ಕೇಸರಿಯು ಹಲವಾರು ಬಗೆಯಿಂದ ನಮ್ಮ ದೇಹಕ್ಕೆ ಲಾಭ ನೀಡುವುದು. ಅಂತಹ ಕೆಲವು ಲಾಭಗಳು ಈ ರೀತಿಯಾಗಿವೆ.
ಅಪಧಮನಿ ಕಾಯಿಲೆ
•ಕೇಸರಿಯಲ್ಲಿ ಥೈಮೇನ್ ಮತ್ತು ರಿಬೊಫ್ಲಾವಿನ್ ಎನ್ನುವ ಖನಿಜಾಂಶಗಳಿದ್ದು, ಇದು ಹೃದಯದ ಆರೋಗ್ಯವನ್ನು ಕಾಪಾಡುವುದು ಹಾಗೂ ಅಪಧಮನಿ ಕಾಯಿಲೆಗಳನ್ನು ದೂರವಿಡುವುದು.
•ನಿತ್ಯವೂ ಕೇಸರಿಯನ್ನು ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ ಅದರಿಂದ ರಕ್ತದಲ್ಲಿನ ತಡೆಯು ನಿವಾರಣೆ ಆಗುವುದು. ಇದು ರಕ್ತ ಸಂಚಾರವನ್ನು ಸುಧಾರಣೆ ಮಾಡುವುದು ಮತ್ತು ರಕ್ತದೊತ್ತಡ ಕಡಿಮೆ ಮಾಡಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯ ತಡೆಯುವುದು.
•ಕೇಸರಿಯು ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವುದು. ಇದರಲ್ಲಿ ಇರುವಂತಹ ಕಾಮೋತ್ತೇಜಕ ಗುಣಗಳು ಖಿನ್ನತೆ ವಿರೋಧಿ ಔಷಧಿ ಸೇವನೆ ಮಾಡುವಂತಹ ಜನರಿಗೆ ತುಂಬಾ ಲಾಭಕಾರಿ.
•ಕೇಸರಿಯಿಂದ ನಿಮಿರು ದೌರ್ಬಲ್ಯ ಮತ್ತು ಸಂಪೂರ್ಣ ಲೈಂಗಿಕ ಕ್ರಿಯೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ಅಧ್ಯಯನಗಳು ಹೇಳಿವೆ.
ಖಿನ್ನತೆ ವಿರೋಧಿ
•ಕೇಸರಿಯನ್ನು ಮನಸ್ಥಿತಿ ಬದಲಾವಣೆ ಮಾಡುವಂತಹ ಮಸಾಲೆ ಎಂದು ಕೂಡ ಕರೆಯಲಾಗುತ್ತದೆ. ಇದರ ಸೇವನೆಯಿಂದಾಗಿ ಮೆದುಳಿನಲ್ಲಿ ಡೊಪಮೈನ್ ಹಾರ್ಮೋನ್ ಮಟ್ಟವು ಏರಿಕೆ ಆಗುವುದು.
•ಬೇರೆ ಯಾವುದೇ ಹಾರ್ಮೋನ್ ಗಳ ಮಟ್ಟದಲ್ಲಿ ಬದಲಾವಣೆ ಆಗುವುದಿಲ್ಲ. ಇದರಿಂದ ಕೇಸರಿ ಸಪ್ಲಿಮೆಂಟ್ ಮನಸ್ಥಿತಿ ಸುಧಾರಣೆ ಮಾಡುವುದು ಮತ್ತು ಖಿನ್ನತೆ ದೂರ ಮಾಡುವುದು ಎಂದು ಪರಿಗಣಿಸಲಾಗಿದೆ.
ನೆನಪು ಶಕ್ತಿ
•ಕೇಸರಿಯಲ್ಲಿ ಕ್ರೋಸಿನ್ ಮತ್ತು ಕ್ರೋಸೆಟಿನ್ ಅಂಶವು ಇದೆ. ಇದು ನೆನಪಿನ ಶಕ್ತಿ ವೃದ್ಧಿಸುವುದು ಮತ್ತು ಮೆದುಳಿನ ಕಾರ್ಯವನ್ನು ಸುಧಾರಣೆ ಮಾಡುವುದು.
•ಇದು ಮೆದುಳಿನ ಉರಿಯೂತ ಕಡಿಮೆ ಮಾಡುವುದು ಹಾಗೂ ಆಕ್ಸಿಡೇಟಿವ್ ಒತ್ತಡವನ್ನು ತಗ್ಗಿಸುವುದು ಎಂದು 2015ರಲ್ಲಿ ನಡೆಸಿರುವಂತಹ ಅಧ್ಯಯನವು ಹೇಳಿವೆ. ಕೇಸರಿಯನ್ನು ಆಹಾರ ಕ್ರಮದಲ್ಲಿ ಸೇವನೆ ಮಾಡಿದರೆ ಅದರಿಂದ ಅಲ್ಝೈಮರ್ ನಂತಹ ಕಾಯಿಲೆಯ ಅಪಾಯವು ಕಡಿಮೆ ಆಗುವುದು ಎಂದು ಕೆಲವು ಅಧ್ಯಯನಗಳು ಕಂಡುಕೊಂಡಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ದಿನಕ್ಕೊಂದು ಕಿತ್ತಲೆಹಣ್ಣು ತಿನ್ನಿ