Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ಶೀತದ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೆ?

ಚಳಿಗಾಲದಲ್ಲಿ ಶೀತದ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೆ?
ಬೆಂಗಳೂರು , ಬುಧವಾರ, 10 ನವೆಂಬರ್ 2021 (09:15 IST)
ಶೀತ, ನೆಗಡಿ, ಕೆಮ್ಮು ಇತ್ಯಾದಿಗಳು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆಗಳು.
ಸೋರುವ ಮೂಗು, ತಲೆನೋವು, ದೇಹದ ನೋವು ಮತ್ತು ಗಂಟಲಿನ ಊತವು ದಿನನಿತ್ಯದ ಕಾರ್ಯಗಳನ್ನು ಮಾಡಲು ತುಂಬಾ ತೊಂದರೆ ನೀಡುವುದು.
ಮೈನಡುಗುವಂತಹ ಚಳಿಯಲ್ಲಿ ಶೀತವು ಇದ್ದರೆ ಆಗ ನಮಗೆ ಏನಾದರೂ ಬಿಸಿ ಬಿಸಿಯಾಗಿರುವುದನ್ನು ಕುಡಿಯಬೇಕು ಎಂದು ಅನಿಸುವುದು ಇದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಸೂಪ್ನಂತಹ ಬಿಸಿ ಪಾನೀಯಗಳನ್ನು ಕುಡಿದರೆ ತುಂಬಾ ಲಾಭಕಾರಿ. ಆದರೆ ಶೀತ ಬರದಂತೆ ತಡೆಯಲು ಕೆಲವೊಂದು ಉಪಾಯಗಳು ಇವೆ. ಅದು ಯಾವುದು ಎಂದು ಸ್ಕ್ರೋಲ್ ಡೌನ್ ಮಾಡುತ್ತಾ ತಿಳಿಯಿರಿ.
ಕೊರೊನಾ ಕಾಲದಲ್ಲಿ ಪ್ರತಿಯೊಬ್ಬರು ಪದೇ ಪದೇ ಕೈಗಳನ್ನು ತೊಳೆಯುತ್ತಾ ಇದ್ದರು. ಆದರೆ ನಿತ್ಯ ಜೀವನದಲ್ಲಿ ಕೂಡ ಕೈಗಳನ್ನು ಸರಿಯಾಗಿ ತೊಳೆಯುತ್ತಾ ಇದ್ದರೆ ಆರೋಗ್ಯಕ್ಕೆ ಒಳ್ಳೆಯದು.
ಅದರಲ್ಲೂ ಚಳಿಗಾಲದಲ್ಲಿ ಶೀತ ಉಂಟು ಮಾಡುವ ವೈರಸ್ ಗಳು ಹರಡುವ ಕಾರಣದಿಂದ ಕೈಗಳನ್ನು ತೊಳೆದರೆ ಉತ್ತಮ. ಸೋಪ್ ಮತ್ತು ನೀರು ಹಾಕಿಕೊಂಡು ಸರಿಯಾಗಿ ಕೈಗಳನ್ನು ತೊಳೆಯಿರಿ. ಇದರಿಂದ ಅನಾರೋಗ್ಯಕ್ಕೆ ಒಳಗಾಗುವುದು ತಪ್ಪುವುದು.
ನೀರು ಕುಡಿಯಿರಿ
webdunia

•ಚಳಿಗಾಲದಲ್ಲಿ ಬಾಯಾರಿಕೆ ಆಗುವುದು ಕಡಿಮೆ. ಆದರೆ ದೇಹವನ್ನು ತೇವಾಂಶದಿಂದ ಇಡಲು ಹೆಚ್ಚಿನ ಪ್ರಮಾಣದಲ್ಲಿ ನೀಡು ಕುಡಿಯಬೇಕು.
•ನೀರು ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರಗೆ ಹಾಕಲು ಸಹಕಾರಿ ಮತ್ತು ಇದರಿಂದ ಅನಾರೋಗ್ಯಕ್ಕೆ ಒಳಗಾಗುವುದು ತಪ್ಪುವುದು.
•ನೀವು ಆರೋಗ್ಯಕಾರಿ ಆಗಿರಲು ದಿನಕ್ಕೆ ಎರಡು ಲೀಟರ್ ನಷ್ಟು ನೀರು ಕುಡಿಯಿರಿ. ಸೂಪ್, ಗ್ರೀನ್ ಟೀಯಂತಹ ಪಾನೀಯಗಳನ್ನು ಸೇವನೆ ಮಾಡಿ.
 ಆಹಾರ ಪದ್ದತಿಯಲ್ಲಿ ಗಮನವಿರಲಿ
webdunia

•ಚಳಿಗಾಲದಲ್ಲಿ ಆರೋಗ್ಯಕಾರಿ ಮತ್ತು ಸಮತೋಲಿತ ಆಹಾರ ಸೇವನೆ ಮಾಡಿ. ಇದರಿಂದ ದೇಹಕ್ಕೆ ಬೇಕಾಗಿರುವಂತಹ ಪೋಷಕಾಂಶಗಳು ಸಿಗುವುದು. ಚಳಿಗಾಲದಲ್ಲಿ ಸತು ಮತ್ತು ವಿಟಮಿನ್ ಡಿ ಕಡೆಗೆ ಹೆಚ್ಚಿನ ಗಮನ ನೀಡಿ.
•ಈ ಎರಡು ಪೋಷಕಾಂಶಗಳು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು ಮತ್ತು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸುವುದು. ಹಸಿರಲೆ ತರಕಾರಿಗಳು, ಧಾನ್ಯಗಳು, ಬೀಜಗಳು ಹಾಗೂ ಹಣ್ಣುಗಳನ್ನು ಸೇವನೆ ಮಾಡಿ.
ನಿದ್ರೆ
webdunia

•ಶೀತ ನಿವಾರಣೆ ಮಾಡಲು ಸರಿಯಾದ ನಿದ್ರೆಯು ಅತೀ ಅಗತ್ಯ. ನಿದ್ರಾಹೀನತೆ ಮತ್ತು ನಿದ್ರೆಯ ಗುಣಮಟ್ಟವು ಸರಿಯಾಗಿ ಇರದೇ ಇದ್ದರೆ ಆಗ ದೇಹವು ವೈರಸ್ ಮತ್ತು ಸೋಂಕಿನ ವಿರುದ್ಧ ಹೋರಾಡಲು ಆಗದು.
•ರಾತ್ರಿ ವೇಳೆ ಗುಣಮಟ್ಟದ ನಿದ್ರೆಯು ಬಂದರೆ ಅದರಿಂದ ನಮ್ಮ ದೇಹವು ಸೈಟೊಕಿನ್ ಎನ್ನುವ ಪ್ರೋಟೀನ್ ಬಿಡುಗಡೆ ಮಾಡುವುದು. ಇದು ಸೋಂಕು ಮತ್ತು ಉರಿಯೂತದ ವಿರುದ್ಧ ಹೋರಾಡುವುದ. ಹೀಗಾಗಿ ನಿತ್ಯವೂ 7-8 ಗಂಟೆಗಳ ಕಾಳ ಸರಿಯಾಗಿ ನಿದ್ರೆ ಮಾಡಿ.
ವ್ಯಾಯಾಮ
webdunia

•ತೂಕ ಇಳಿಸಲು ಮತ್ತು ಸ್ನಾಯುಗಳನ್ನು ಬಲಪಡಿಸಲು ವ್ಯಾಯಾಮವು ಅತ್ಯುತ್ತಮ ಸಾಧನ. ವ್ಯಾಯಾಮವು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು ಹಾಗೂ ಶೀತ ತಡೆಯುವುದು. ದೇಹದಲ್ಲಿ ರಕ್ತ ಸಂಚಾರವನ್ನು ಸುಧಾರಣೆ ಮಾಡುವ ಮೂಲಕ ಪ್ರತಿರೋಧಕ ಅಂಗಾಂಶಗಳು ಬೇಗನೆ ಪ್ರಯಾಣಿಸುವಂತೆ ಮಾಡುವುದು.
•ಇದರಿಂದ ಸೋಂಕನ್ನು ಉತ್ತಮ ರೀತಿಯಲ್ಲಿ ತಡೆಯಲು ಸಹಕಾರಿ. ನಿಯಮಿತವಾಗಿ ವ್ಯಾಯಾಮ ಮಾಡಿಕೊಂಡು, ದೈಹಿಕವಾಗಿ ಚಟುವಟಿಕೆಯಿಂದ ಇದ್ದರೆ ಅದು ಆರೋಗ್ಯಕ್ಕೆ ಲಾಭಕಾರಿ.


Share this Story:

Follow Webdunia kannada

ಮುಂದಿನ ಸುದ್ದಿ

ಕುಂಬಳಕಾಯಿ ಪ್ರಯೋಜನಗಳನ್ನು ತಿಳಿಯಿರಿ