ನಮ್ಮ ಚರ್ಮ ಯಾವುದಾದರೂ ಒಂದು ಭಾಗದಲ್ಲಿ ಗಂಟಿನ ರೂಪಕ್ಕೆ ತಿರುಗಿಕೊಳ್ಳುತ್ತದೆ. ಅದು ಬ್ಯಾಕ್ಟೀರಿಯಾಗಳ ಶೇಖರಣೆಯಿಂದ ಅಥವಾ ಅತಿಯಾದ ಎಣ್ಣೆಯ ಅಂಶದ ಉತ್ಪತ್ತಿಯಾಗಿ ಈ ರೀತಿ ಆಗಬಹುದು.
ಸಾಮಾನ್ಯವಾಗಿ ಇಂತಹ ಗುಳ್ಳೆಗಳು ಅಥವಾ ಗಂಟುಗಳು ನೋವು ಕೊಡುವುದಿಲ್ಲ. ಲೇಸರ್ ಸರ್ಜರಿ ಅಥವಾ ಇನ್ನಿತರ ತ್ವಚೆಗೆ ಸಂಬಂಧಪಟ್ಟ ಚಿಕಿತ್ಸೆಗಳಿಂದ ಅವುಗಳನ್ನು ಪರಿಹಾರ ಮಾಡಬಹುದು.
ಆದರೆ ಈಗಿನ ಕಾಲದಲ್ಲಿ ಶಸ್ತ್ರಚಿಕಿತ್ಸೆಗಳು ತುಂಬಾ ದುಬಾರಿಯಾಗಿವೆ ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ ಆಸ್ಪತ್ರೆ ಕಡೆಗೆ ಮುಖ ಮಾಡದೆ ಮನೆಯಲ್ಲಿ ಏನಾದರೂ ಪರಿಹಾರ ಇಂತಹ ಸಮಸ್ಯೆಗಳಿಗೆ ಇದೆಯೇ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರೆ, ಈ ಲೇಖನದಲ್ಲಿ ಅದಕ್ಕೆ ಉತ್ತರವಿದೆ.
ಬಾಳೆಹಣ್ಣಿನ ಸಿಪ್ಪೆ
•ಆಯುರ್ವೇದ ತಜ್ಞರ ಪ್ರಕಾರ, ಬಾಳೆ ಹಣ್ಣಿನ ಸಿಪ್ಪೆಯಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣ ಲಕ್ಷಣಗಳು ಕಂಡು ಬರುತ್ತವೆ. ಇವುಗಳು ನೋವು ನಿವಾರಣೆಯಲ್ಲಿ ಮಾತ್ರವಲ್ಲದೆ ಚರ್ಮದ ಮೇಲೆ ಕಂಡುಬರುವ ಯಾವುದೇ ಗಾಯ ಅಥವಾ ಗುಳ್ಳೆ ಅಕ್ಕಪಕ್ಕದಲ್ಲಿ ಹರಡದಂತೆ ನೋಡಿಕೊಳ್ಳುತ್ತದೆ.
•ಹೀಗಾಗಿ ಬಾಳೆಹಣ್ಣಿನ ಒಳಭಾಗದ ಸಿಪ್ಪೆಯ ತಿರುಳನ್ನು ಚರ್ಮದ ಮೇಲೆ ಆಂಟಿ ಹಾಕಿ ಇಡೀ ರಾತ್ರಿ ಹಾಗೇ ಬಿಟ್ಟು ಬಹಳ ಬೇಗನೆ ಪರಿಹಾರವನ್ನು ಕಂಡುಕೊಳ್ಳಬಹುದು.
ಈರುಳ್ಳಿ
•ಚರ್ಮದ ಮೇಲಿನ ನರಹುಲಿ ಅಥವಾ ಗುಳ್ಳೆಗಳಿಗೆ ಅಥವಾ ಗಂಟುಗಳಿಗೆ ಉತ್ತಮವಾದ ಇನ್ನೊಂದು ಪರಿಹಾರವೆಂದರೆ ಅದು ನಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಈರುಳ್ಳಿ. ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಔಷಧೀಯ ಗುಣ ಲಕ್ಷಣಗಳು ಮತ್ತು ಆಂಟಿ ವೈರಲ್ ಸ್ವಭಾವಗಳು ಕಂಡುಬರುತ್ತವೆ.
•ಹೀಗಾಗಿ ಈರುಳ್ಳಿಯನ್ನು ಕತ್ತರಿಸಿ ಗಂಟುಗಳ ಮೇಲ್ಭಾಗದಲ್ಲಿ ಇಟ್ಟುಕೊಂಡು ಬ್ಯಾಂಡೇಜ್ ಮಾಡಿ ಒಂದು ದಿನ ಬಿಟ್ಟು ತೆಗೆದುಹಾಕಿದರೆ ಮತ್ತು ಮೂರ್ನಾಲ್ಕು ದಿನಗಳು ಇದೇ ರೀತಿ ಮುಂದುವರೆಸಿದರೆ ಗಂಟುಗಳ ನಿವಾರಣೆ ಸಾಧ್ಯವಾಗುತ್ತದೆ.