Select Your Language

Notifications

webdunia
webdunia
webdunia
webdunia

ವಾವ್! ಟೊಮೋಟೊ ಈ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರ

ವಾವ್! ಟೊಮೋಟೊ ಈ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರ
ಬೆಂಗಳೂರು , ಮಂಗಳವಾರ, 9 ನವೆಂಬರ್ 2021 (07:19 IST)
ಧೂಮಪಾನವು ಯಾವತ್ತಿಗೂ ಆರೋಗಕ್ಕೆ ಒಳ್ಳೆಯದಲ್ಲ, ಅದರಿಂದ ದೇಹಕ್ಕೆ ನಿತ್ಯವೂ ಹಾನಿ ಆಗುತ್ತಲಿರುವುದು ಮತ್ತು ಅದು ಹಲವಾರು ಬಗೆಯ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗುವುದು.
ಆದರೆ ಧೂಮಪಾನಿಗಳು ಈ ಒಂದು ಹಣ್ಣಿನ ಸೇವನೆ ಮಾಡಿದರೆ ಅದರಿಂದ ಧೂಮಪಾನದಿಂದ ಆಗುವಂತಹ ಅಪಾಯವನ್ನು ಕಡಿಮೆ ಮಾಡಬಹುದು. ಆದರೆ ಧೂಮಪಾನಿಗಳು ಸಿಗರೇಟ್ ಇತ್ಯಾದಿಗಳನ್ನು ತ್ಯಜಿಸಿದರೆ ತುಂಬಾ ಒಳ್ಳೆಯದು.
ಇದು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ, ಬೇರೆಯವರ ಆರೋಗ್ಯದ ಮೇಲೂ ಪರಿಣಾಮ ಬೀರುವುದು. ಹೀಗಾಗಿ ನೀವು ಕೆಲವೊಂದು ಹಣ್ಣುಗಳನ್ನು ಸೇವನೆ ಮಾಡಿದರೆ ಅದು ಧೂಮಪಾನದಿಂದ ಆಗುವಂತಹ ಅಪಾಯವನ್ನು ಕಡಿಮೆ ಮಾಡುವುದು.
ಹೃದಯ
ಅಪಧಮನಿ ಕಾಯಿಲೆ ಮತ್ತು ಹೃದಯದ ಸಮಸ್ಯೆಗಳನ್ನು ಲೈಕೋಪೆನೆ ಅಂಶವು ಕಡಿಮೆ ಮಾಡುವುದು ಎಂದು ಅಧ್ಯಯನಗಳು ಹೇಳಿವೆ.
ಧೂಮಪಾನ
ಧೂಮಪಾನ ಮತ್ತು ಧೂಮಪಾನಿಗಳು ಬಿಡುವಂತಹ ಹೊಗೆಯಿಂದ ಆಗುವ ಹಾನಿಯಿಂದ ಟೊಮೆಟೊ ರಕ್ಷಿಸುವುದು. ಸಿಗರೇಟ್ ನ ಧೂಮದಿಂದಾಗಿ ದೇಹದಲ್ಲಿ ಉಂಟಾಗುವಂತಹ ಕ್ಯಾನ್ಸರ್ ಕಾರಕ ಅಂಶಗಳಿಂದ ಟೊಮೆಟೊದಲ್ಲಿ ಇರುವಂತಹ ಕೂಮರಿಕ್ ಆಮ್ಲ ಮತ್ತು ಕ್ಲೋರೊಜೆನಿಕ್ ಆಮ್ಲ ರಕ್ಷಿಸುವುದು.
ಜೀರ್ಣಕ್ರಿಯೆ
ಇದು ಜೀರ್ಣಕ್ರಿಯೆ ವ್ಯವಸ್ಥೆ ಮತ್ತು ಯಕೃತ್ ನ ಕಾರ್ಯಕ್ಕೆ ಸಹಕಾರಿ. ಮಲಬದ್ಧತೆಯನ್ನು ಇದು ನಿವಾರಿಸುವುದು. ಮಲಬದ್ಧತೆ ನಿವಾರಣೆ ಮಾಡಲು ಪಾಲಕ್ ಜ್ಯೂಸ್ ಗೆ ಇದನ್ನು ಸೇರಿಸಿ ಸೇವಿಸಬೇಕು.
ಕಿಡ್ನಿ
ಇದರಲ್ಲಿ ಇರುವಂತಹ ಸೋಂಕು ನಿವಾರಕ ಅಂಶಗಳು ಅತಿಸಾರದಿಂದ ದೇಹವನ್ನು ರಕ್ಷಿಸುವುದು ಮತ್ತು ಕಿಡ್ನಿಯಲ್ಲಿ, ಮೂತ್ರಕೋಶದ ಕಲ್ಲುಗಳು ಆಗದಂತೆ ತಡೆಯುವುದು. ಮೂತ್ರಕೋಶದಲ್ಲಿನ ಸಮಸ್ಯೆಗಳನ್ನು ಇದು ನಿವಾರಣೆ ಮಾಡುವುದು.
ಪ್ರತಿರೋಧಕ ವ್ಯವಸ್ಥೆ
ಟೊಮೆಟೊವನ್ನು ನಿತ್ಯವೂ ಸೇವನೆ ಮಾಡಿದರೆ ಅದು ರಕ್ತದಲ್ಲಿ ವಿಟಮಿನ್ ಸಿ ಅಂಶವನ್ನು ವೃದ್ಧಿಸುವುದು. ಇದರಿಂದ ಒತ್ತಡದ ಹಾರ್ಮೋನ್ ಕಡಿಮೆ ಆಗುವುದು ಮತ್ತು ಪ್ರತಿರೋಧಕ ಶಕ್ತಿ ವೃದ್ಧಿಸುವುದು. ಹೀಗಾಗಿ ಒತ್ತಡ ಕಡಿಮೆ ಮಾಡಲು ಟೊಮೆಟೊ ಜ್ಯೂಸ್ ಕುಡಿಯಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಳೆ ಹಣ್ಣು ಸೇವನೆ, ಆರೋಗ್ಯದ ರಕ್ಷಣೆ!