Select Your Language

Notifications

webdunia
webdunia
webdunia
webdunia

ತೂಕ ಇಳಿಕೆಗೆ ತುಂಬಾ ಉಪಯುಕ್ತ ಈ ಏಲಕ್ಕಿ

ತೂಕ ಇಳಿಕೆಗೆ ತುಂಬಾ ಉಪಯುಕ್ತ ಈ ಏಲಕ್ಕಿ
ನವದೆಹಲಿ , ಬುಧವಾರ, 10 ನವೆಂಬರ್ 2021 (10:13 IST)
ಉತ್ತಮ ಸುವಾಸನೆಯನ್ನು ಹೊಂದಿರುವ ಏಲಕ್ಕಿಯನ್ನು ಪ್ರಮುಖವಾಗಿ ಸಿಹಿ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ.
ಏಲಕ್ಕಿ ನೀರನ್ನು ನೀವು ಸೇವಿಸುವುದರಿಂದ ನಿಮ್ಮ ದೇಹದ ತೂಕ ಇಳಿಕೆ ಆಗುತ್ತದೆ ಎಂಬುವುದರ ಬಗ್ಗೆ ನೀವು ನಂಬಿಕೆ ಹೊಂದಿದ್ದೀರಾ? ಭಾರತೀಯ ಸಾಂಬಾರು ಪದಾರ್ಥಗಳು ಒಂದಲ್ಲ ಒಂದು ರೀತಿಯ ಉತ್ತಮ ಗುಣಗಳನ್ನು ಹೊಂದಿವೆ. ಆದ್ದರಿಂದಲೇ ಇವುಗಳನ್ನು ಪ್ರಪಂಚದಾದ್ಯಂತ ಎಲ್ಲಾ ಸ್ಥಳಗಳಲ್ಲಿಯೂ ಬಳಸಲಾಗುತ್ತದೆ.
ಒಂದು ಲೋಟ ಬಿಸಿ ನೀರಿಗೆ ಕೆಲವೇ ಕೆಲವು ಏಲಕ್ಕಿ ಕಾಳುಗಳನ್ನು ಸೇರಿಸುವುದರಿಂದ ನಿಮ್ಮ ತೂಕ ನಷ್ಟ ಅತ್ಯುತ್ತಮವಾಗಿ ಆಗುತ್ತದೆ. ತೂಕ ನಷ್ಟಕ್ಕಾಗಿ ಹಲವಾರು ಜನರು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಿರುವುದನ್ನು ನಾವು ದಿನನಿತ್ಯದಲ್ಲಿ ನೋಡುತ್ತಿದ್ದೇವೆ.
ಏಲಕ್ಕಿಯಲ್ಲಿ ಮೆಲಟೋನಿನ್ ನ ಪ್ರಮಾಣ ಉತ್ತಮವಾಗಿದೆ. ಈ ಪದಾರ್ಥವು ಚಯಾಪಚಯ ಕ್ರಿಯೆಯ ದರವನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ.
ನಿಮ್ಮ ದೇಹದಲ್ಲಿರುವ ಕೊಬ್ಬು ಕಡಿಮೆಯಾಗುತ್ತಾ ಬಂದರೆ ನಿಮ್ಮ ತೂಕ ಸಾಮಾನ್ಯವಾಗಿಯೇ ಕಳೆದು ಹೋಗುತ್ತದೆ. ಪುರಾತನ ಕಾಲದಿಂದಲೂ ಏಲಕ್ಕಿಯನ್ನು ನಮ್ಮ ಪೂರ್ವಜರು ಬಳಸುತ್ತಿದ್ದರು. ಪುರಾತನ ಕಾಲದಲ್ಲಿ ಏಲಕ್ಕಿಯನ್ನು ಅದ್ದೂರಿ ಊಟ ಮಾಡಿದ ನಂತರ ಬಾಯಿ ಫ್ರೆಶ್ನರ್ ಆಗಿ ಬಳಸಲಾಗುತ್ತಿತ್ತು.
ಏಲಕ್ಕಿ ಕಾಳುಗಳನ್ನು ಚೆನ್ನಾಗಿ ಅಗಿದು ಸೇವಿಸುವುದರಿಂದ ಇದು ಬಿಡುಗಡೆಮಾಡುವ ರಸವು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಕೊಬ್ಬಿನಂಶವನ್ನು ವೇಗಗೊಳಿಸಲು ಸಹಾಯಮಾಡುತ್ತದೆ. ಅಲ್ಲದೆ ಅಜೀರ್ಣದ ಸಮಸ್ಯೆ ಹೊಂದಿರುವವರು ಸಹ ಏಲಕ್ಕಿಯನ್ನು ತಿನ್ನುವುದರ ಮೂಲಕ ಅಜೀರ್ಣದ ಪ್ರಮಾಣವನ್ನು ಕಡಿಮೆ ಮಾಡಬಹುದು.ಹೀಗಾಗಿ,ನೀವು ವೇಗವಾಗಿ ತೂಕ ಇಳಿಸಿಕೊಳ್ಳಲು ಯೋಜನೆ ಹಾಕಿದ್ದರೆ,ಮಲಗುವ ವೇಳೆ ಪಾನಿಯವಾಗಿ ಒಂದು ಲೋಟ ಬಿಸಿ ನೀರಿಗೆ ನಾಲ್ಕರಿಂದ ಐದು ಏಲಕ್ಕಿ ಕಾಳುಗಳನ್ನು ಸೇರಿಸಿ ಸೇವಿಸಿ.ಇದು ನಿಮ್ಮ ತೂಕ ನಿಯಂತ್ರಣ್ಕೆ ಸಹಕಾರ ನೀಡುತ್ತದೆ.
ತಜ್ಞರು ಏನು ಹೇಳುತ್ತಾರೆ?
ಈ ರೀತಿ ಏಲಕ್ಕಿ ಸೇರಿಸಿದ ಪಾನೀಯ ಮತ್ತು ಊಟಕ್ಕೆ ಮಸಾಲೆಗಳನ್ನು ಸೇರಿಸುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು ಮತ್ತು ಚಯಾಪಚಯ ದರವನ್ನು ಹೆಚ್ಚಿಸಬಹುದು. ಫೆನ್ನೆಲ್, ಏಲಕ್ಕಿ ಮತ್ತು ಲವಂಗದಂತಹ ಮಸಾಲೆಗಳನ್ನು ನಿಮ್ಮ ಪಾನೀಯಗಳಿಗೆ ಸೇರಿಸಬಹುದು. ಈ ಎಲ್ಲಾ ಪದಾರ್ಥಗಳು ನಿಮ್ಮ ತೂಕವನ್ನು ಕಡಿಮೆ ಮಾಡುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ,ಸ್ಥೂಲಕಾಯತೆಯು ಇಡೀ ಪ್ರಪಂಚದ ಮೇಲೆ ಪರಿಣಾಮವನ್ನು ಬೀರುತ್ತಿದೆ ಮತ್ತು ಪ್ರಸ್ತುತ ಸಾಂಕ್ರಾಮಿಕ ರೋಗಕ್ಕೆ ಹೆಚ್ಚಿನ ಕಾರಣವೆಂದರೆ ಹೆಚ್ಚಿನ ಗ್ಲೈಸೆಮಿಕ್ ಲೋಡ್ ಹೊಂದಿರುವ ಆಹಾರಗಳ ಸೇವನೆಯಿಂದ ಎಂಬುದಾಗಿದೆ.
ಆಧುನಿಕ ಆಹಾರ ಪದ್ಧತಿಗಳು, ಸಂಸ್ಕರಿಸಿದ ಪದಾರ್ಥ, ವೇಗವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್ಗಳು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂಬುದು ಅವರ ಅಭಿಪ್ರಾಯ. ಈ ಆಹಾರಗಳು ಹಾರ್ಮೋನುಗಳ ಪ್ರಕ್ರಿಯೆಯನ್ನು ಉಂಟುಮಾಡುತ್ತವೆ. ಇದು ಮೂಲಭೂತವಾಗಿ ನಿಮ್ಮ ಚಯಪಚಯ ಕ್ರಿಯೆಯನ್ನು ಬದಲಾಯಿಸುತ್ತದೆ. ಕೊಬ್ಬಿನ ಶೇಖರಣೆ, ತೂಕ ಹೆಚ್ಚಾಗುವುದು ಮತ್ತು ಸ್ಥೂಲಕಾಯತೆಯನ್ನು ಇದು ಹೆಚ್ಚಿಸುತ್ತದೆ. ಆದ್ದರಿಂದ ನಾವು ಸೇವಿಸುವ ಆಹಾರದ ಬಗ್ಗೆ ನಮಗೆ ಹೆಚ್ಚಿನ ಕಾಳಜಿ ಇರಬೇಕು.
ನೀವು ದಿನನಿತ್ಯದಲ್ಲಿ ತಯಾರಿಸುವ ಯಾವುದೇ ಆಹಾರ ಪದಾರ್ಥಕ್ಕೆ ಇದನ್ನು ಸೇರಿಸಿಕೊಳ್ಳುವ ಮೂಲಕ ಇದರ ಬಳಕೆಯನ್ನು ಹೆಚ್ಚಿಸಬಹುದು. ಇದು ಉತ್ತಮವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.ಒಂದು ವೇಳೆ ಇದನ್ನು ನೀವು ಬಳಸುವ ಯಾವುದೇ ಪದಾರ್ಥದೊಂದಿಗೆ ಮಿಶ್ರಣ ಮಾಡಿ ಬಳಸಲು ನಿಮಗೆ ಇಷ್ಟವಿಲ್ಲದಿದ್ದರೆ ಇದನ್ನು ನೇರವಾಗಿ ನಿಮ್ಮ ಬಾಯಿಗೆ ಹಾಕಿ ಚೆನ್ನಾಗಿ ಅವರು ಸಹ ನೀವು ಇದನ್ನು ಬಳಸಬಹುದು.ಇದರಿಂದ ನಿಮ್ಮ ಬಾಯಿಯ ಸುವಾಸನೆಯು ಸಹ ಉತ್ತಮವಾಗಿರುತ್ತದೆ ಮತ್ತು ನಿಮ್ಮ ಜೀರ್ಣಕ್ರಿಯೆಯೂ ಸಹ ಉತ್ತಮವಾಗಿ ಇರುತ್ತದೆ.
ರೋಗನಿರೋಧಕ ಶಕ್ತಿ
ಏಲಕ್ಕಿಯು ಆಯುರ್ವೇದದಲ್ಲಿ ಪ್ರಾಚೀನಕಾಲದಿಂದಲೂ ಬಳಕೆಯಾಗುತ್ತಿರುವ ಸಾಂಬಾರು ಪದಾರ್ಥವಾಗಿದೆ.ಇದರಲ್ಲಿರುವ ಉತ್ತಮ ಗುಣವು ಕ್ಯಾನ್ಸರ್ ವಿರೋಧಿಯಾಗಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರ ನೀಡುತ್ತದೆ. ಏಲಕ್ಕಿ ನೀರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕಿ, ಜೀರ್ಣಕ್ರಿಯೆಯನ್ನು ಉತ್ತಮವಾಗಿಸುವ ಮೂಲಕ ನಿಮ್ಮ ತೂಕ ನಿಯಂತ್ರಣಕ್ಕೆ ಸಹಕಾರ ನೀಡುತ್ತದೆ.ತೂಕ ಇಳಿಕೆಗೆ ಮಾತ್ರವಲ್ಲದೆ ಹೊಟ್ಟೆಯುಬ್ಬರ ಮತ್ತು ಅಸಿಡಿಟಿಯ ಸಮಸ್ಯೆಯನ್ನು ಎದುರಿಸುವವರು ಸಹ ಏಲಕ್ಕಿಯನ್ನು ಸೇವಿಸಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಿಯುತ ಮುಖ ನಿಮ್ಮದಾಗಬೇಕೆ? ಇದನ್ನು ಟ್ರೈ ಮಾಡಿ