Publish Date: Thu, 03 Oct 2019 (08:49 IST)
Updated Date: Thu, 03 Oct 2019 (14:48 IST)
ಬೆಂಗಳೂರು: ಹೊಸದಾಗಿ ಮದುವೆಯಾದ ದಂಪತಿಗಳಲ್ಲಿ ದೈಹಿಕ ಸಂಪರ್ಕದ ಬಗ್ಗೆ ತುಂಬಾ ಕುತೂಹಲ, ಕಾತುರತೆ ಇರುವುದು ಸಹಜ. ಆದರೆ ಹೊಸದಾಗಿ ಲೈಂಗಿಕ ಕ್ರಿಯೆ ನಡೆಸುವಾಗ ಬರುವ ಸಮಸ್ಯೆಗಳನ್ನು ಯಾರಿಗೂ ಹೇಳಲಾಗದೇ ಒದ್ದಾಡುತ್ತಾರೆ.
ಮಹಿಳೆಯರು ಸಾಮಾನ್ಯವಾಗಿ ಹೊಸದಾಗಿ ಲೈಂಗಿಕ ಸಂಪರ್ಕ ನಡೆಸುವಾಗ ಗುಪ್ತಾಂಗದಲ್ಲಿ ನೋವು ಅನುಭವಿಸುತ್ತಾರೆ. ಆರಂಭದಲ್ಲಿ ಸಣ್ಣ ಮಟ್ಟಿನ ನೋವು ಸಹಜ. ಆದರೆ ಇದು ಲೈಂಗಿಕ ಕ್ರಿಯೆಗೆ ಅಡ್ಡಿಯಾಗುತ್ತಿದ್ದರೆ, ತಡೆಯಲಾಗದಷ್ಟು ನೋವಿದ್ದರೆ ಇದಕ್ಕೆ ಹಲವು ಕಾರಣಗಳಿರಬಹುದು. ಕಿರಿದಾದ ಗುಪ್ತಾಂಗ, ಸೋಂಕು ಇತ್ಯಾದಿ ಸಮಸ್ಯೆಗಳೂ ಕಾರಣವಾಗಬಹುದು. ಅದಕ್ಕೆ ತಕ್ಷಣವೇ ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮ.