Select Your Language

Notifications

webdunia
webdunia
webdunia
webdunia

ದಪ್ಪಗಿದ್ದರೆ ಗರ್ಭಿಣಿಯಾಗಲು ತೊಂದರೆಯಾಗಬಹುದು

Pregnancy

Krishnaveni K

ಬೆಂಗಳೂರು , ಶನಿವಾರ, 9 ಮಾರ್ಚ್ 2024 (10:44 IST)
ಬೆಂಗಳೂರು: ದೇಹ ತೂಕ ನಮ್ಮಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಅದೇ ರೀತಿ ಗರ್ಭದಾರಣೆ ಮೇಲೂ ಪರಿಣಾಮ ಬೀರಬಹುದು ಎಂದು ತಜ್ಞರೇ ಹೇಳುತ್ತಾರೆ.

ಇತ್ತೀಚೆಗಿನ ದಿನಗಳಲ್ಲಿ ಬಹುತೇಕ ಮಹಿಳೆಯರಿಗೆ ಸ್ಥೂಲಕಾಯ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಅವರು ಮಾಡುವ ಕೆಲಸ, ಆಹಾರ ಶೈಲಿ ಕೂಡಾ ಕಾರಣವಾಗಬಹುದು. ದೇಹ ತೂಕ ಅತಿಯಾಗಿರುವುದರಿಂದ ಮಹಿಳೆಯರಲ್ಲಿ ಫರ್ಟಿಲಿಟಿ ಮೇಲೆ ಪರಿಣಾಮ ಬೀರಬಹುದು ಎಂದು ಅನೇಕ ಅಧ್ಯಯನಗಳೇ ಹೇಳಿವೆ.

ಹೀಗಾಗಿ ಗರ್ಭವತಿಯಾಗಲು ಬಯಸುತ್ತಿದ್ದರೆ ನಮ್ಮ ದೇಹ ತೂಕ ನಿಯಂತ್ರಿಸಲು ಅನಾರೋಗ್ಯಕರ ಆಹಾರ ಮತ್ತು ಜೀವನ ಶೈಲಿಯನ್ನು ತ್ಯಜಿಸುವುದು ಉತ್ತಮ. ದೇಹದ ಕೊಬ್ಬು ಹಾರ್ಮೋನ್ ನ್ನು ನಿಯಂತ್ರಿಸುತ್ತದೆ ಮತ್ತು ಬಂಜೆತನಕ್ಕೆ ಕಾರಣವಾಗುತ್ತದೆ.

ಅತಿಯಾದ ದೇಹ ತೂಕದಿಂದ ಅನಿಯಮಿತ ಮುಟ್ಟು, ಅಂಡಾಣು ಬಿಡುಗಡೆಯಂತಹ ಸಮಸ್ಯೆ ಬರಬಹುದು. ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಲ್ಲೂ ಸ್ಥೂಲಕಾಯ ಬಂಜೆತನಕ್ಕೆ ಕಾರಣವಾಗಬಹುದು. ಹೀಗಾಗಿ ಮಗು ಪಡೆಯಲು ಬಯಸುವ ಗಂಡು-ಹೆಣ್ಣು ಇಬ್ಬರೂ ಮೊದಲು ತಮ್ಮ ದೇಹ ತೂಕದ ಬಗ್ಗೆ ಗಮನಹರಿಸುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಲಿನಿಂದ ಚರ್ಮ ಕಪ್ಪಾಗುವುದನ್ನು ತಪ್ಪಿಸಲು ಇಲ್ಲಿದೆ ಸಿಂಪಲ್ ಟ್ರಿಕ್