Select Your Language

Notifications

webdunia
webdunia
webdunia
webdunia

ಬಿಸಿಲಿನಿಂದ ಚರ್ಮ ಕಪ್ಪಾಗುವುದನ್ನು ತಪ್ಪಿಸಲು ಇಲ್ಲಿದೆ ಸಿಂಪಲ್ ಟ್ರಿಕ್

Skin

Krishnaveni K

ಬೆಂಗಳೂರು , ಶುಕ್ರವಾರ, 8 ಮಾರ್ಚ್ 2024 (13:51 IST)
Photo Courtesy: Twitter
ಬೆಂಗಳೂರು: ಬೇಸಿಗೆ ಬಂತೆಂದರೆ ಸಾಕು ಹೊರಗೆ ಓಡಾಡಲೂ ಆತಂಕ. ಅತಿಯಾಗಿ ಬಿಸಿಲಿಗೆ ಓಡಾಡುವುದರಿಂದ ಚರ್ಮ ಕಪ್ಪಗಾಗುತ್ತದೆ ಎಂಬ ಆತಂಕ. ಇದಕ್ಕೆ ಟೊಮೆಟೊ ಬಳಸಿ ಸಿಂಪಲ್ ಪರಿಹಾರವೊಂದನ್ನು ಮಾಡಿ ನೋಡಿ.

ಟೊಮೆಟೊದಲ್ಲಿ ವಿಟಮಿನ್ ಎ ಮತ್ತು ಸಿ ಅಂಶ ಹೇರಳವಾಗಿದೆ. ಅಲ್ಲದೆ ಇದು ಉತ್ತಮ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡಬಲ್ಲದು. ಹೀಗಾಗಿ ಟೊಮೆಟೊ ಚರ್ಮವನ್ನು ಸಂರಕ್ಷಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಚರ್ಮವನ್ನು ಬಿಸಿಲು ಮತ್ತು ಸೂರ್ಯನ ಅತಿ ನೇರಳೆ ಕಿರಣಗಳಿಂದ ಚರ್ಮ ಸಂರಕ್ಷಿಸುವ ಗುಣವನ್ನೂ ಹೊಂದಿರುತ್ತದೆ. ಹೀಗಾಗಿ ಟೊಮೆಟೊ ಫೇಸ್ ಪ್ಯಾಕ್ ಆಗಿ ಬಳಸಬಹುದು. ಇದನ್ನು ಮಾಡುವುದು ಹೇಗೆ ಎಂದು ಇಲ್ಲಿ ನೋಡಿ.

2 ಟೊಮೆಟೊ ಬಳಸಿ ಪ್ಯೂರಿ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಅಲ್ಯುವೀರಾ ಜೆಲ್ ನ್ನು ಸೇರಿಸಿಕೊಂಡು ನುಣ್ಣನೆಯ ಪೇಸ್ಟ್ ಮಾಡಿಕೊಳ್ಳಿ. ಈ ಫೇಸ್ ಪ್ಯಾಕ್ ನ್ನು ಕೇವಲ ಮುಖ ಮಾತ್ರವಲ್ಲ, ಚರ್ಮ ಕಪ್ಪಾದ ಭಾಗಗಳಿಗೆ ಹಚ್ಚಿ 20 ನಿಮಿಷ ಹಾಗೆಯೇ ಬಿಡಿ. ಬಳಿಕ ಹದ ಬಿಸಿ ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.

ಈ ರೀತಿ ನಿಯಮಿತವಾಗಿ ಮಾಡುವುದರಿಂದ ಚರ್ಮದ ಕಪ್ಪು ಕಲೆಗಳು ಮಾಯವಾಗುವುದಲ್ಲದೆ, ಸೂರ್ಯ ಬಿಸಿಲಿನಿಂದ ಚರ್ಮ ಸಂರಕ್ಷಣೆ ಮಾಡಲೂ ಸಹಾಯ ಮಾಡುತ್ತದೆ. ಇದರಿಂದ ಚರ್ಮದ ಒರಿಜಿನಲ್ ಕಾಂತಿ ಮರಳಿ ಪಡೆಯಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲಾಡ್ ಗಳನ್ನು ರಾತ್ರಿ ಹೊತ್ತು ಸೇವಿಸಬಹುದೇ ಎಂಬ ಅನುಮಾನಕ್ಕೆ ಇಲ್ಲಿದೆ ಉತ್ತರ