Publish Date: Wed, 19 Aug 2020 (07:43 IST)
Updated Date: Wed, 19 Aug 2020 (07:44 IST)
ಬೆಂಗಳೂರು : ಓಟ್ಸ್ ಆರೋಗ್ಯಕರವಾದ್ದದು. ಇದರಿಂದ ರುಚಿಕರವಾದ, ಆರೋಗ್ಯಕರವಾದ ಉಪ್ಪಿಟ್ಟು ಮಾಡಿ.
ಬೇಕಾಗುವ ಸಾಮಾಗ್ರಿಗಳು : 1 ಕಪ್ ಓಟ್ಸ್, 2 ಚಮಚ ಎಣ್ಣೆ, 1 ಚಮಚ ಸಾಸಿವೆ, 1 ಚಮಚ ಉದ್ದಿನ ಬೇಳೆ, 1 ಚಮಚ ಕಡಲೆಬೇಳೆ, 2 ಚಮಚ ನೆಲಗಡಲೆ, 4 ಹಸಿಮೆಣಸಿನಕಾಯಿ, 1 ಈರುಳ್ಳಿ, ½ ಚಮಚ ಅರಶಿನ, ½ ಕಪ್ ತುರಿದ ತೆಂಗಿನಕಾಯಿ, ಉಪ್ಪು, ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು, ½ ನಿಂಬೆ, 1 ಕ್ಯಾರೆಟ್, /4 ಕಪ್ ಬಟಾಣಿ.
ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಫ್ರೈ ಮಾಡಿ. ಬಳಿಕ ಅದಕ್ಕೆ ಹಸಿಮೆಣಸಿನ ಕಾಯಿ, ಅರಿಶಿನ, ಈರುಳ್ಳಿ, ಉಪ್ಪು, ಕರಿಬೇವು ಹಾಕಿ ಫ್ರೈ ಮಾಡಿ. ಆಮೇಲೆ ಬಟಾಣಿ, ಕ್ಯಾರೆಟ್ ಸೇರಿಸಿ ಮಿಶ್ರಣ ಮಾಡಿ ಬೇಯಿಸಿ. ಬೆಂದ ಬಳಿಕ ಓಟ್ಸ್ ಮತ್ತು ಉಪ್ಪು, ತೆಂಗಿನಕಾಯಿ ಹಾಕಿ ಮತ್ತೆ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ, ನಿಂಬೆ ರಸ ಬೆರೆಸಿದರೆ ಓಟ್ಸ್ ಉಪ್ಪಿಟ್ಟು ರೆಡಿ.