Publish Date: Fri, 15 Nov 2019 (08:54 IST)
Updated Date: Fri, 15 Nov 2019 (08:56 IST)
ಬೆಂಗಳೂರು: ನಾನು 20 ರ ಹರೆಯದ ಯುವತಿ. ನನಗೆ ಇತ್ತೀಚೆಗೆ ಅತಿಯಾದ ಲೈಂಗಿಕ ಕಾಮನೆಯುಂಟಾಗುತ್ತಿದೆ. ಇದನ್ನು ತಡೆಯಲಾಗದೇ ಪೋರ್ನ್ ಸಿನಿಮಾ ನೋಡಲು ಶುರು ಮಾಡಿದ್ದೇನೆ. ಇದು ಖಾಯಿಲೆಯ ಲಕ್ಷಣವೇ?
ಹದಿಹರೆಯದ ವಯಸ್ಸಿನಲ್ಲಿ ಲೈಂಗಿಕ ಕಾಮನೆ ಮೂಡುವುದು ಅಸಹಜವಲ್ಲ. ಇದು ಸಾಮಾನ್ಯ. ಇದು ಯಾವುದೇ ಖಾಯಿಲೆಯ ಲಕ್ಷಣವೂ ಅಲ್ಲ. ಆದರೆ ಅತಿಯಾಗಿ ಇದರಿಂದ ನಿಮ್ಮ ದೈನಂದಿನ ಕೆಲಸಗಳಿಗೆ ತೊಂದರೆಯಾಗುತ್ತಿದ್ದರೆ, ಏಕಾಗ್ರತೆ ಭಂಗವಾಗುತ್ತಿದ್ದರೆ ಸೂಕ್ತ ತಜ್ಞರನ್ನು ಕಂಡು ಸಮಾಲೋಚನೆ ನಡೆಸುವುದು ಒಳಿತು. ಇಲ್ಲವಾದರೆ, ಮನಸ್ಸನ್ನು ಬೇರೆ ಕಡೆ ಸೆಳೆಯುವಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ನಿಮ್ಮ ಮನೋಬಲದಿಂದಲೇ ಇದನ್ನು ನಿಯಂತ್ರಿಸಿಕೊಳ್ಳಬಹುದು.