Publish Date: Tue, 12 Nov 2019 (09:15 IST)
Updated Date: Tue, 12 Nov 2019 (09:16 IST)
ಬೆಂಗಳೂರು: ಪತ್ನಿಗೆ ಲೈಂಗಿಕ ತೃಪ್ತಿ ನೀಡಲು ನನ್ನ ಗುಪ್ತಾಂಗದ ಗಾತ್ರ ಸಮಸ್ಯೆಯಾಗಿತ್ತು. ಹೀಗಾಗಿ ಬೇರೆ ಗಂಡಸರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಲು ನಾನೇ ಸೂಚಿಸಿದೆ. ಈಗ ಆಕೆಗೆ ನನ್ನ ಮೇಲೆ ಆಸಕ್ತಿಯೇ ಇಲ್ಲದಾಗಿದೆ. ಬೇರೆ ಗಂಡಸರ ಸಹವಾಸ ಬಿಡು ಎಂದರೂ ಬಿಡುತ್ತಿಲ್ಲ. ಹಾಗಂತ ಅವಳನ್ನೂ ಬಿಡಲಾರೆ. ಏನು ಮಾಡಲಿ?
ನೀವೇ ಮಾಡಿದ ಸ್ವಯಂಕೃತ ತಪ್ಪು ಇದು. ಈಗ ಕೊರಗುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಒಂದು ವೇಳೆ ನಿಮ್ಮ ಗುಪ್ತಾಂಗದ ಗಾತ್ರದ ಸಮಸ್ಯೆಯಿಂದಾಗಿ ಪತ್ನಿಗೆ ಸುಖ ನೀಡಲು ಸಾಧ್ಯವಾಗುತ್ತಿರಲಿಲ್ಲವೆಂದರೆ ಆಗಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಿತ್ತು.
ಈಗಲೂ ಕಾಲ ಮಿಂಚಿಲ್ಲ. ಇಬ್ಬರೂ ಪರಸ್ಪರ ಮಾತನಾಡಿ, ಸೂಕ್ತ ಸಮಾಲೋಚಕರನ್ನು ಭೇಟಿಯಾಗಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬಹುದು.