Select Your Language

Notifications

webdunia
webdunia
webdunia
webdunia

ದಾರಿಯಲ್ಲಿ ಕಾಣಸಿಗುವ ಉತ್ತರಣೆ ಗಿಡದಲ್ಲಿರುವ ಔಷಧಿಯ ಗುಣಗಳನ್ನು ತಿಳಿಬೇಕಾ…?

ದಾರಿಯಲ್ಲಿ ಕಾಣಸಿಗುವ ಉತ್ತರಣೆ ಗಿಡದಲ್ಲಿರುವ ಔಷಧಿಯ ಗುಣಗಳನ್ನು ತಿಳಿಬೇಕಾ…?
ಬೆಂಗಳೂರು , ಗುರುವಾರ, 31 ಮೇ 2018 (06:23 IST)
ಬೆಂಗಳೂರು : ಉತ್ತರಣೆ ಗಿಡವನ್ನು ನಾವು ಹಲವು ಕಡೆಗಳಲ್ಲಿ ಕಂಡಿರುತ್ತೇವೆ. ಇದು ನಾವು ದಾರಿಯಲ್ಲಿ. ಪೊದೆಗಳಲ್ಲಿ ಬೆಳೆಯುತ್ತದೆ. ಎಲ್ಲೆಂದರಲ್ಲಿ ಹದವಾಗಿ , ಸೋಮಪಾಗಿ ಬೆಳೆಯುವ ಈ ಉತ್ತರಣೆ ಗಿಡ ಹಲವು ರೋಗಗಳನ್ನು, ಸಮಸ್ಯೆಗಳನ್ನು  ನಿವಾರಿಸುತ್ತದೆಯಂತೆ.


*ಜಾಂಡೀಸ್ ನಿವಾರಣೆಗೆ : 10 ಗ್ರಾಂ ಉತ್ತರಣೆ ಬೀಜಗಳನ್ನು ರಾತ್ರಿ ನೆನೆಹಾಕಿ ಬೆಳೆಗ್ಗೆ ಚೆನ್ನಾಗಿ ರುಬ್ಬಿ, ಮಜ್ಜಿಗೆಯೊಂದಿಗೆ ಸೇವಿಸಬೇಕು. (ಒಂದು ವಾರ) ಪಥ್ಯ: ತಿಳಿಸಾರು, ಅನ್ನ, ಎಣ್ಣೆ ಸೇವಿಸಕೂಡದು.

*ಸರ್ಪ ವಿಷ ನಿವಾರಣೆಗೆ: ಉತ್ತರಣೆಯ ಬೇರು, ಕರಿಮೆಣಸು, ಎರಡನ್ನು ಸಮ ಪ್ರಮಾಣದಲ್ಲಿ ಚೂರ್ಣಿಸಿಕೊಂಡು, ಒಂದು ಚಮಚದಷ್ಟು ನುಣ್ಣನೆಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಕುಡಿಸಬೇಕು. ವಿಷವು ನಿವಾರಣೆಯಾಗುವವರೆಗೂ ಆಗಾಗ ಕುಡಿಸುತ್ತಿರಬೇಕು.

*ಬಂಜೆತನದಲ್ಲಿ: ಉತ್ತರಾಣಿ ಗಿಡದ ಹೂಗೊಂಚಲುಗಳನ್ನು ತಂದು ಎಮ್ಮೆ ಹಾಲಿನಲ್ಲಿ ನಯವಾಗಿ ಅರೆದು ಬಟ್ಟೆಯಲ್ಲಿ ಶೋಧಿಸುವುದು. ದಿವಸಕ್ಕೆ 10 ಗ್ರಾಂನಷ್ಟು ಹಾಲನ್ನು ಮುಟ್ಟಾಗಿರುವಾಗ ಐದು ದಿವಸ ಸೇವಿಸುವುದು. ಹಾಲು ಅನ್ನ ಪಥ್ಯ, ಶಾಂತಚಿತ್ತರಾಗಿರುವುದು. ಹೀಗೆ ಕ್ರಮವಾಗಿ ಮೂರು ಮುಟ್ಟಿನಲ್ಲಿ ಮಾಡಬೇಕು.

*ಇಸಬಿಗೆ : ಕೆಂಪು ಉತ್ತರಾಣಿ ಗಿಡವನ್ನು ಬೇರು ಸಹಿತ ತಂದು, ಸುಟ್ಟು ಬೂದಿ ಮಾಡುವುದು. 20 ಗ್ರಾಂ ಈ ಬೂದಿಗೆ 5 ಗ್ರಾಂ ವೀಳೆದೆಲೆಗೆ ಹಾಕುವ ಸುಣ್ಣ ಮತ್ತು 5 ಗ್ರಾಂ ಅರಿಶಿಣದ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಶೋಧಿಸಿದ ಗೋಮೂತ್ರದಲ್ಲಿ ಅರೆದು ಹಚ್ಚುವುದು.

*ಪೆಟ್ಟು ತಾಗಿ, ರಕ್ತ ಸೋರುತ್ತಿದ್ದರೆ:  ಕೆಂಪು ಉತ್ತರಾಣಿ ಗಿಡದ ಸೊಪ್ಪಿನ ರಸವನ್ನು ಗಾಯದ ಮೇಲೆ ಹಿಂಡುವುದು. ತಕ್ಷಣ ರಕ್ತಸ್ರಾವ ನಿಲ್ಲುವುದು ಮತ್ತು ಗಾಯವು ಕ್ರಮೇಣ ವಾಸಿಯಾಗುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ                       

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಹೆಚ್ಚು ಕಡಿಮೆಯಾದರೆ ಈ ಅಪಾಯಗಳು ತಪ್ಪಿದ್ದಲ್ಲ!