Publish Date: Tue, 15 May 2018 (05:56 IST)
Updated Date: Tue, 15 May 2018 (05:57 IST)
ಬೆಂಗಳೂರು: ಇಂದು ರಾಜ್ಯದ ಚುಕ್ಕಾಣಿ ಹಿಡಿಯುವ ಹೊಸ ನಾಯಕ ಯಾರು ಎಂದು ತೀರ್ಮಾನವಾಗುವ ದಿನ. ಆದರೆ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ನಿನ್ನೆ ದಿನವಿಡೀ ಮೌನ ವ್ರತ ಮಾಡಿದ್ದಾರೆ.
ಸದಾ ರಾಜಕೀಯ ಕೆಸರೆರಚಾಟ ಮಾಡುವ ನಾಯಕರು ನಿನ್ನೆಯಿಡೀ ಮಾಧ್ಯಮಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದಿದ್ದಾರೆ. ಯಾವುದೇ ಮೆಸೇಜ್ ಅಥವಾ ಸಂದರ್ಶನ ನೀಡಿಲ್ಲ.
ಇಂದು ಫಲಿತಾಂಶದ ಬಳಿಕವಷ್ಟೇ ಈ ನಾಯಕರ ಟ್ವಿಟರ್ ಖಾತೆಗಳಿಗೆ ಬಹುಶಃ ಜೀವ ಬರಬಹುದು! ಭಾನುವಾರದ ಬಳಿಕ ಸಿಎಂ ಸಿದ್ದರಾಮಯ್ಯ ಖಾತೆಯಿಂದ ಒಂದೇ ಟ್ವೀಟ್ ಹೊರಬಿದ್ದಿಲ್ಲ. ಮಾಧ್ಯಮಗಳಿಗೂ ಮಾತಾಡಿಲ್ಲ. ಅತ್ತ ಬಿಎಸ್ ಯಡಿಯೂರಪ್ಪ ಮಾತ್ರ ನಿನ್ನೆ ಒಂದೇ ಒಂದು ಸಂದೇಶ ಬರೆದುಕೊಂಡಿದ್ದರು. ಅದೂ ವಿತ್ತ ಸಚಿವರ ಅರುಣ್ ಜೇಟ್ಲಿ ಆರೋಗ್ಯಕ್ಕೆ ಶುಭಹಾರೈಸಿರುವುದು ಮಾತ್ರ. ಅದು ಬಿಟ್ಟರೆ ಎಲ್ಲೆಲ್ಲೂ ಮೌನ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.