Select Your Language

Notifications

webdunia
webdunia
webdunia
webdunia

ನಿಮ್ಮ ಮುಖವು ಹೊಳೆಯುವಂತೆ ಮಾಡಲು ಇಲ್ಲಿದೆ ನೋಡಿ ಟಿಪ್ಸ್

ನಿಮ್ಮ ಮುಖವು ಹೊಳೆಯುವಂತೆ ಮಾಡಲು ಇಲ್ಲಿದೆ ನೋಡಿ ಟಿಪ್ಸ್
ಬೆಂಗಳೂರು , ಸೋಮವಾರ, 21 ಮೇ 2018 (11:54 IST)
ಬೆಂಗಳೂರು: ಇಂದಿನ ಜೀವನಶೈಲಿ, ನಾವು ಸೇವಿಸುವ ಆಹಾರ ಇವುಗಳೆಲ್ಲವೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂದು ಸಾಕಷ್ಟು ಮಂದಿ ಮಹಿಳೆಯರು ಮೊಡವೆ, ಮುಖದ ಕಲೆ, ನೆರಿಗೆಗಳಿಂದ ಬಳಲುತ್ತಿದ್ದಾರೆ. ರಾಸಾಯನಿಕ ವಸ್ತುಗಳನ್ನು ಅತಿಯಾದ ಉಪಯೋಗದಿಂದ ಮುಖದ ಹೊಳಪು ಕೂಡ ಕಂದಿ ಹೋಗಿರುತ್ತದೆ. ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳಿಂದ ಮುಖಕ್ಕೆ ಹೊಳಪನ್ನು ನೀಡಬಹುದು.


ಹಾಲು: ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಹೊಳಪನ್ನು ಹೆಚ್ಚಿಸಬಹುದಂತೆ.ಹಸಿಯಾದ ಹಾಲಿಗೆ ಹತ್ತಿಯುಂಡೆ ಅದ್ದಿ ಅದನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿನ ಕಪ್ಪು ಕಲೆ ನಿವಾರಣೆಯಾಗುತ್ತದೆ.

ರೋಸ್ ವಾಟರ್: ಹತ್ತಿಯುಂಡೆಯನ್ನು ರೋಸ್ ವಾಟರ್ ನಲ್ಲಿ ಅದ್ದಿ. - ಅದನ್ನು ನಿಮ್ಮ ಮುಖದ ಮೇಲೆ ಮೆಲುವಾಗಿ ಉಜ್ಜಿ - ಅದು ನಿಮ್ಮ ಚರ್ಮದ ಮೇಲೆ ರಾತ್ರಿಯಿಡೀ ಇರುವಂತೆ ಬಿಡಿ. - ಬೆಳಿಗ್ಗೆ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.

ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡುವುದು ನಿಮ್ಮ ಚರ್ಮವನ್ನು ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿದರೆ ರಕ್ತ ಪರಿಚಲನೆಯನ್ನು ಪ್ರಚೋದಿಸಿ ನಿಮ್ಮ ಮುಖ ಹೊಳಪಾಗಿ ಹಾಗೂ ತಾಜಾ ಆಗಿ ಕಾಣಲು ನೆರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರ ಸ್ಖಲನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಇಲ್ಲಿದೆ ನೋಡಿ ಮನೆಮದ್ದು