Select Your Language

Notifications

webdunia
webdunia
webdunia
webdunia

ಹಾಲಿಗೆ ಬೆಲ್ಲ ಸೇರಿಸಿ ಕುಡಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಹಾಲಿಗೆ ಬೆಲ್ಲ ಸೇರಿಸಿ ಕುಡಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?
ಬೆಂಗಳೂರು , ಬುಧವಾರ, 16 ಮೇ 2018 (06:47 IST)
ಬೆಂಗಳೂರು : ಹಾಲು ಸಂಪೂರ್ಣ ಆಹಾರ. ನಮ್ಮ ಶರೀರಕ್ಕೆ ಅಗತ್ಯವಾಗಿ ಬೇಕಾಗುವ ವಿಟಮಿನ್ ಗಳನ್ನು ಒದಗಿಸುತ್ತದೆ. ಬೆಲ್ಲವನ್ನು ಸಕ್ಕರಗೆ ಬದಲಿಯಾಗಿ ಉಪಯೋಗಿಸುತ್ತಾರೆ. ಇದರಿಂದ ಆರೋಗ್ಯಕ್ಕೆ  ಹೆಚ್ಚಿನ ಲಾಭವಿದೆ. ಬಿಸಿ ಬಿಸಿ ಹಾಲಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಸೇವಿಸಿದರೆ ಅನೇಕ ರೀತಿಯ ಅನಾರೋಗ್ಯ ಸಮಸ್ಯೆಗಳು ಸಹ ನಿವಾರಣೆ ಆಗುತ್ತವೆ.


ಈ ರೀತಿ ಹಾಲು ಕುಡಿಯುವುದರಿಂದ ನಮಗಾಗುವ ಪ್ರಯೋಜನಗಳು :
*ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ಸ್ಥೂಲಕಾಯ ನಿವಾರಣೆಯಾಗುತ್ತದೆ. ಬೆಲ್ಲದಲ್ಲಿರುವ ಔಷಧೀಯ ಗುಣಗಳಿಂದ ಶರೀರದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆಯಾಗುತ್ತದೆ. ನಿತ್ಯವೂ ಹೀಗೆ ಸೇವಿಸುವುದರಿಂದ ಶರೀರದ ತೂಕ ಸಮತೋಲನದಲ್ಲಿರುತ್ತದೆ.


*ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ರಕ್ತಹೀನತೆಯಿಂದ ನರಳುತ್ತಿದ್ದಾರೆ. ಇದರ ಪರಿಣಾಮವಾಗಿ ಆರೋಗ್ಯ ಏರು ಪೇರಾಗುತ್ತದೆ. ಶರೀರಕ್ಕೆ ಪೋಷಕಾಂಷಗಳು ಸೇರ್ಪಡೆಯಾಗುವುದಿಲ್ಲ. ಆದರೆ,ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಇದು ವರದಾನವಾಗಿದೆ.

*ಬಿಸಿ ಹಾಲಿಗೆ ಬೆಲ್ಲ ಬೆರೆಸಿ ಸೇವಿಸಿದರೆ, ಅದರಲ್ಲಿರುವ ಪೋಷಕಾಂಶಗಳಿಂದ ತಲೆ ಕೂದಲು ಹೊಳಪಾಗುತ್ತವೆ. ಕೂದಲು ಉದುರುವುದು ನಿಂತುಹೋಗುತ್ತದೆ, ತಲೆಹೊಟ್ಟು ನಿವಾರಣೆಯಾಗುತ್ತದೆ.

*ಮಹಿಳೆಯರಿಗೆ ಋತುಚಕ್ರದಲ್ಲಿ ಪೀಡಿಸುವ ವಿವಿಧ ಸಮಸ್ಯೆಗಳು,ಮುಖ್ಯವಾಗಿ ಹೊಟ್ಟೆ ನೋವು ಕಡಿಮೆಯಾಗುತ್ತದೆ.

*ಬೆಲ್ಲ ಬೆರೆಸಿದ ಹಾಲಿಗೆ ಪ್ರಾಕೃತಿಕವಾದ ಆಂಟಿಬಯಾಟಿಕ್,ಆಂಟಿ ವೈರಲ್ ಗುಣಗಳಿರುತ್ತದೆ. ಆದುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್ ಸೊಂಕುಗಳು ಕಡಿಮೆಯಾಗುತ್ತವೆ.

*ವೃದ್ಧಾಪ್ಯದಲ್ಲಿ ಬಹಳಷ್ಟು ಮಂದಿ ಕೀಲು ನೋವುಗಳ ಸಮಸ್ಯೆಗೆ ಗುರಿಯಾಗುತ್ತಾರೆ. ಅಂತಹವರು ಪ್ರತಿದಿನ ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ನೋವಿನಿಂದ ಉಪಶಮನ ಲಭಿಸುತ್ತದೆ ಮತ್ತು ಕೀಲುಗಳು ದೃಢವಾಗುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಲವು ಸಮಸ್ಯೆಗೆ ರಾಮಬಾಣ ಈ ಗರಿಕೆ ಹುಲ್ಲು