Select Your Language

Notifications

webdunia
webdunia
webdunia
webdunia

ಅಂದದ ಮುಖಕ್ಕೆ ಚೆಂದದ ಫೇಸ್ ಪ್ಯಾಕ್

ಅಂದದ ಮುಖಕ್ಕೆ ಚೆಂದದ ಫೇಸ್ ಪ್ಯಾಕ್
ಬೆಂಗಳೂರು , ಶುಕ್ರವಾರ, 11 ಮೇ 2018 (13:52 IST)
ಫುಲ್ಲರ್ಸ್ ಅರ್ಥ್ ಎಂದು ಕರೆಯಲ್ಪಡುವ ಮುಲ್ತಾನಿ ಮಿಟ್ಟಿಯಲ್ಲಿ ಚರ್ಮದ ಸೌಂದರ್ಯವರ್ಧಕ ಗುಣಗಳಿವೆ. ಮುಲ್ತಾನಿ ಮಿಟ್ಟಿ ಚರ್ಮವನ್ನು ಶುದ್ದೀಕರಣ ಮತ್ತು ಸ್ವಚ್ಛಗೊಳಿಸುತ್ತದೆ. ಮುಲ್ತಾನಿ ಮಿಟ್ಟಿಯಲ್ಲಿರುವ ಮೆಗ್ನಿಶಿಯಂ ಕ್ಲೋರೈಡ್ ಚರ್ಮದಲ್ಲಿರುವ ಮೊಡವೆ ಮತ್ತು ಕಲೆಗಳನ್ನು ನಿವಾರಿಸುತ್ತದೆ. 
ಮುಲ್ತಾನಿ ಮಿಟ್ಟಿ ಮುಲ್ತಾನಿ ಮಿಟ್ಟಿಯನ್ನು ನೀರಿನಲ್ಲಿ ಕಲಸಿಕೊಂಡು ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮುಖವನ್ನು ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಮ್ಮೆ ಮಾಡಿದರೆ  ಚರ್ಮದ ಕಾಂತಿ ಹೆಚ್ಚಾಗುತ್ತದೆ.
 
ಒಂದು ಬಾದಾಮಿಯನ್ನು ಪುಡಿ ಮಾಡಿ ಮತ್ತು ಇದಕ್ಕೆ ಒಂದು ಹನಿ ಹಾಲು ಹಾಕಿ. ಈ ಮಿಶ್ರಣಕ್ಕೆ ಸ್ವಲ್ಪ ಮುಲ್ತಾನಿ ಮಿಟ್ಟಿಯನ್ನು ಹಾಕಿ ಫೇಸ್ ಪ್ಯಾಕ್ ಮಾಡಿ. ಇದರಿಂದ ನಿಮ್ಮ ಚರ್ಮ ಮೃದುವಾಗುತ್ತದೆ.
 
ಮೊಸರಿನೊಂದಿಗೆ ಕೆಲವು ಪುದೀನಾ ಎಲೆಗಳನ್ನು ಮಿಕ್ಸಿಗೆ ಹಾಕಿ ಅರೆದು ಅದಕ್ಕೆ ಸ್ವಲ್ಪ ಮೊಸರು ಸೇರಿಸಿಕೊಳ್ಳಿ. ಈ ಮಿಶ್ರಣವನ್ನು ಮಿಲ್ತಾನಿ ಮಿಟ್ಟಿಗೆ ಹಾಕಿ ಫೇಸ್ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಕ್ಕೆಜೋಳದ ರೇಷ್ಮೆಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಉಪಯೋಗಕಾರಿ ಗೊತ್ತಾ