Select Your Language

Notifications

webdunia
webdunia
webdunia
webdunia

ಬಾದಾಮಿಯಲ್ಲಿ ಕಣ್ಣೀರಿಟ್ಟ ಶ್ರೀರಾಮುಲು

ಬಾದಾಮಿ
ಬಾದಾಮಿ : ಬಾದಾಮಿ ಕ್ಷೇತ್ರದಲ್ಲಿ ಸೊಲನುಭವಿಸಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ಕಣ್ಣೀರಿಟ್ಟಿದ್ದಾರೆ.

ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೂ ಕೂಡ ಬಾದಾಮಿಯಲ್ಲಿ  ಸಿದ್ದರಾಮಯ್ಯ ಅವರ ವಿರುದ್ಧ ಸೋಲನುಭವಿಸಿದ್ದಾರೆ. ಇದರಿಂದ ಶ್ರೀರಾಮುಲು ಹಾಗೂ ಅವರ ಜೊತೆ ಅವರ ಬೆಂಬಲಿಗರು ಕೂಡ ಕಣ್ಣೀರಿಟ್ಟದ್ದಾರೆ.

 

ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿ ಶ್ರೀ ರಾಮುಲು ಅವರು,’ನೈತಿಕವಾಗಿ ಗೆಲುವು ನನ್ನದೆ ಆಗಿದೆ, ಬಾದಾಮಿಯಲ್ಲಿ ಸಿದ್ದರಾಮಯ್ಯ ರ ಗೆಲುವು ಗೆಲುವು ಅಲ್ಲ. ನನ್ನ ಸೋಲಿಗೆ ಜೆಡಿಎಸ್ ಹೆಚ್ಚು ಮತ ತಗೆದುಕೊಂಡಿದ್ದೆ ಕಾರಣ. ಜೆಡಿಎಸ್ ಅಭ್ಯರ್ಥಿ ಬಾದಾಮಿ ಯಲ್ಲಿ ಇಷ್ಟೊಂದು ಮತ ಪಡೆಯುತ್ತಾರೆ ಎಂದು ನಾನು ಊಹಿಸಿರಲಿಲ್ಲ . ಬಾದಾಮಿಯಿಂದ ನಾನು ಗೆಲ್ಲಬೇಕೆನ್ನುವ ಆಸೆಯಿತ್ತು, ಸೋತಿರೋದಕ್ಕೆ ಭಾವುಕನಾದೆ. ನಾನು ಬಾದಾಮಿಯಲ್ಲಿ ಸೋಲನ್ನು ಕಂಡರೂ ಆಗಾಗ ಬಾದಾಮಿಗೆ ಬಂದು ಹೋಗುವೆ ಎಂದು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಬಂಪರ್ ಆಫರ್?!