Publish Date: Sat, 22 Jun 2019 (09:04 IST)
Updated Date: Sat, 22 Jun 2019 (09:06 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಯುವ ಜನಾಂಗ ಮೌಖಿಕ ಲೈಂಗಿಕತೆ ಬಗ್ಗೆ ಹೆಚ್ಚು ಆಸಕ್ತರಾಗುತ್ತಿರುವ ಬಗ್ಗೆ ಅನೇಕ ಅಧ್ಯಯನಗಳು ಹೇಳಿವೆ. ಆದರೆ ಇದು ಸುರಕ್ಷಿತವೇ?
ಮೌಖಿಕ ಮಿಲನದಿಂದ ಹಲವು ಆರೋಗ್ಯ ಅಪಾಯಗಳೂ ಇವೆ ಎಂಬುದನ್ನು ಮರೆಯಬಾರದು. ಮೌಖಿಕವಾಗಿ ಹರಡುವ ಅನೇಕ ಸೋಂಕಿಗೆ ಇದು ದಾರಿ ಮಾಡಿಕೊಡುತ್ತದೆ.
ಸಂಗಾತಿಯ ಬ್ಯಾಕ್ಟೀರಿಯಾ ಸೋಂಕು ತಗುಲಬಹುದು. ಅಲ್ಲದೇ ಬಾಯಿಯೊಳಗಿನ ಅಂಗಾಂಶಗಳು ಮೃದುವಾಗಿದ್ದು, ಇದಕ್ಕೆ ಹಾನಿಯಾಗಬಹುದು. ಇದರಿಂದ ಸುಲಭವಾಗಿ ಸೋಂಕು ದೇಹ ಪ್ರವೇಶಿಸಬಹುದು. ಅಷ್ಟೇ ಅಲ್ಲದೆ, ಮೌಖಿಕ ಸಂಬಂಧ ಮಾಡುವಾಗ ಲೈಂಗಿಕ ಪರಾಕಾಷ್ಟೆ ಸಹಜವಾಗಿ ಸಿಗದು.