Publish Date: Thu, 04 Jul 2019 (08:57 IST)
Updated Date: Thu, 04 Jul 2019 (08:58 IST)
ಬೆಂಗಳೂರು: ಪುರುಷರಲ್ಲಿ ಕಂಡುಬರುವ ಲೈಂಗಿಕ ಸಮಸ್ಯೆಗಳಲ್ಲಿ ಶೀಘ್ರಸ್ಖಲನ ಸಮಸ್ಯೆಯೂ ಒಂದು. ಇದರಿಂದಾಗಿ ಲೈಂಗಿಕ ಜೀವನದಲ್ಲಿ ಸಂಗಾತಿಯನ್ನು ತೃಪ್ತಿಪಡಿಸಲು ಅಥವಾ ಸ್ವಯಂ ತೃಪ್ತಿ ಸಿಗದೇ ಇರಬಹುದು.
ಶೀಘ್ರಸ್ಖಲನವಾಗಲು ಕಾರಣಗಳು ಅನೇಕ ಇರಬಹುದು. ಆದರೆ ಇದರಿಂದ ಮಕ್ಕಳಾಗಲು ತೊಂದರೆಯಾದರೆ ಎಂಬ ಆತಂಕ ಪುರುಷರಿಗೆ ಕಾಡುತ್ತದೆ.
ಶೀಘ್ರಸ್ಖಲನವಾಗುವುದರಿಂದ ಮಕ್ಕಳಾಗಲು ತೊಂದರೆಯೇನೂ ಇಲ್ಲ. ವೀರ್ಯಾಣು ಆರೋಗ್ಯವಾಗಿದ್ದರೆ ಮಕ್ಕಳಾಗಲು ತೊಂದರೆಯಾಗದು. ಹಾಗಿದ್ದರೂ ಇದರಿಂದ ಲೈಂಗಿಕ ತೃಪ್ತಿ ಸಿಗದೇ ಹೋದಲ್ಲಿ ತಜ್ಞ ವೈದ್ಯರಿಂದ ಸಲಹೆ ಪಡೆಯುವುದು ಉತ್ತಮ.