Publish Date: Fri, 26 Jul 2019 (08:59 IST)
Updated Date: Fri, 26 Jul 2019 (11:48 IST)
ಬೆಂಗಳೂರು: ಹರೆಯದ ಲೈಂಗಿಕ ಕಾಮನೆಗಳನ್ನು ಹೊರಹಾಕಲು ಇರುವ ಒಂದು ಆರೋಗ್ಯಕರ ಅಭ್ಯಾಸ ಆತ್ಮರತಿ. ಆದರೆ ಹೀಗೆ ಮಾಡುವುದರಿಂದ ಪುರುಷರ ಜನನಾಂಗದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಅನುಮಾನಗಳು ಅನೇಕರಲ್ಲಿವೆ.
ಪದೇ ಪದೇ ಆತ್ಮರತಿ ಮಾಡುವುದರಿಂದ ಜನನಾಂಗ ಚಿಕ್ಕದಾಗಬಹುದೇ, ವೀರ್ಯ ನಷ್ಟವಾಗಬಹುದೇ ಎಂಬಿತ್ಯಾದಿ ಅನುಮಾನಗಳು ಕಾಡುತ್ತವೆ.
ಆದರೆ ಯಾವುದೇ ಜನನಾಂಗವು ಲೈಂಗಿಕವಾಗಿ ಸರಿಯಾಗಿ ಕೆಲಸ ಮಾಡುತ್ತಿದ್ದರೆ ಅದು ಚಿಕ್ಕದಾಗುವ ಸಾಧ್ಯತೆಯಿಲ್ಲ. ಆದರೆ ಇದುವೇ ಒಂದು ಚಟವಾದರೆ ಈ ಭಾಗದಲ್ಲಿ ನೋವು, ಸುಲಭವಾಗಿ ಲೈಂಗಿಕ ಉತ್ಸಾಹ ಬಾರದೇ ಇರುವುದು ಇತ್ಯಾದಿ ಸಮಸ್ಯೆಗಳು ಬರಬಹುದು. ಹಾಗಾಗಿ ಇದನ್ನು ಚಟವಾಗದಂತೆ ನೋಡಿಕೊಳ್ಳುವುದು ಮುಖ್ಯ.