Webdunia - Bharat's app for daily news and videos

Install App

ಹೊಟ್ಟೆಯ ಕೊಬ್ಬು ಕರಗಲು ಸ್ನಾನಕ್ಕೆ ಮೊದಲು ಈ ಎಣ್ಣೆಯಿಂದ ಮಸಾಜ್ ಮಾಡಿ

Webdunia
ಬುಧವಾರ, 1 ಆಗಸ್ಟ್ 2018 (06:28 IST)
ಬೆಂಗಳೂರು : ಬದಲಾಗುತ್ತಿರುವ ಅಹಾರದ ಅಭ್ಯಾಸ, ಜಂಕ್, ಫಾಸ್ಟ್ ಫುಡ್ ಸಂಸ್ಕೃತಿಯಲ್ಲಿ ಹೆಚ್ಚಿನವರ  ತೂಕದ ಹೆಚ್ಚಾಗುವುದರ ಜೊತೆಗೆ ಹೊಟ್ಟೆಯಲ್ಲಿ ಕೊಬ್ಬಿನಂಶ ಶೇಖರಣೆಗೊಂಡು ಹೊಟ್ಟೆ ದಪ್ಪವಾಗುತ್ತದೆ. ಇದರಿಂದ ಅವರ  ಫಿಗರ್ ಅಸಹ್ಯವಾಗಿ ಕಾಣುವುದರ ಜೊತೆಗೆ  ಹೊಟ್ಟೆ ಕಾಣಿಸುವಂತಹ  ಡ್ರೆಸ್ ಗಳನ್ನು ಕೂಡ ಧರಿಸುವಂತಿಲ್ಲ. ಇಂತಹ ಸಮಸ್ಯೆ ಇರುವವರು ಹೊಟ್ಟೆಯನ್ನು ಈ ಎಣ್ಣೆಯಿಂದ ಮಸಾಜ್ ಮಾಡಿದರೆ ಹೊಟ್ಟೆ ಕೊಬ್ಬನ್ನು ಕರಗಿಸಬಹುದು.


ಹೌದು. ಸ್ನಾನಕ್ಕೆ ಹೋಗುವ ಮೊದಲು ಹೊಟ್ಟೆಯ ಮೇಲೆ ಎಳ್ಳೆಣ್ಣೆಯಿಂದ 15 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಇದರಿಂದ ಜೀರ್ಣಶಕ್ತಿ ಉತ್ತಮಗೊಳ್ಳುವುದರ ಜೊತೆಗೆ ಹೆಚ್ಚಿನ ಪ್ರಮಾಣದ ಕೊಬ್ಬುನ್ನು  ಕರಗಿಸುತ್ತದೆ.


ಹಾಗೇ ಎಳ್ಳೆಣ್ಣೆಯಲ್ಲಿ ಒಮೆಗಾ 3, 6 ಫ್ಯಾಟಿ ಆಸಿಡ್ಸ್ ಹೆಚ್ಚಾಗಿ ಇರುತ್ತವೆ. ಇವು ಬಿಪಿಯನ್ನು ಕಡಿಮೆ ಮಾಡುತ್ತವೆ. ದೇಹದಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತವೆ. ಎಳ್ಳೆಣ್ಣೆಯಲ್ಲಿ ವಿಟಮಿನ್ ಇ, ಬಿಗಳು ಹೇರಳವಾಗಿ ಇರುತ್ತವೆ. ಇವು ಚರ್ಮವನ್ನು ರಕ್ಷಿಸುವುದಷ್ಟೇ ಅಲ್ಲ, ಎಲ್ಲಾ ರೀತಿಯ ಚರ್ಮ ಸಮಸ್ಯೆಗಳನ್ನು ದೂರ ಮಾಡುತ್ತವೆ. ಎಳ್ಳೆಣ್ಣೆಯನ್ನು ನಿತ್ಯ ಬಳಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಚರ್ಮ ಮೃದುವಾಗಿ ಬದಲಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments