Publish Date: Fri, 30 Jan 2026 (19:12 IST)
Updated Date: Fri, 30 Jan 2026 (19:14 IST)
ನಮ್ಮ ರಾತ್ರಿಯ ಊಟದಲ್ಲಿ ಕೆಲ ಬದಲಾವಣೆಗಳನ್ನು ಮಾಡುವುದರಿಂದ ನಮ್ಮ ತೂಕ ಇಳಿಕೆಯಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ಕಾಣಬಹುದು. ಇದರಲ್ಲಿ "ರಾತ್ರಿ ಏನು ತಿನ್ನುತ್ತೇವೆ" ಮತ್ತು "ಹೇಗೆ ಮಲಗುತ್ತೇವೆ" ಎಂಬುದು ಇಲ್ಲಿ ಬಹಳ ಮುಖ್ಯ.
ತೂಕ ಇಳಿಸಿಕೊಳ್ಳಲು ರಾತ್ರಿಯ ಸಮಯದಲ್ಲಿ ಈ ಸಲಹೆಗಳನ್ನು ಪಾಲಿಸಿದ್ದಲ್ಲಿ ತೂಕ ಇಳಿಸಿಕೊಳ್ಳಬಹುದು.
1. ಆಹಾರದ ಕ್ರಮ (Diet)
ನಿದ್ದೆ ಮಾಡುವ 2, 3ಗಂಟೆಗೂ ಮುನ್ನಾ ಊಟವನ್ನು ಮಾಡಿ. ಇದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತದೆ.
ಲಘು ಆಹಾರ: ರಾತ್ರಿ ಊಟ ಯಾವಾಗಲೂ ಹಗುರವಾಗಿರಲಿ. ರೊಟ್ಟಿ, ತರಕಾರಿ ಪಲ್ಯ, ನವಣೆ ಅಥವಾ ಓಟ್ಸ್ನಂತಹ ನಾರಿನಂಶವಿರುವ ಆಹಾರ ಸೇವಿಸಿ.
ಇನ್ನೂ ರಾತ್ರಿ ಆದಷ್ಟು ಸಕ್ಕರೆ ಮತ್ತು ಮೈದಾ, ಸಿಹಿ ಪದಾರ್ಥಗಳನ್ನು ತಿನ್ನಬೇಡಿ.
2. ಪಾನೀಯಗಳು
ಉಗುರು ಬೆಚ್ಚಗಿನ ನೀರು: ಮಲಗುವ ಮುನ್ನ ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯುವುದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.
ಗ್ರೀನ್ ಟೀ ಅಥವಾ ಜೀರಿಗೆ ನೀರು: ಇವು ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತವೆ.
ಪೂರ್ಣ ಪ್ರಮಾಣದ ನಿದ್ರೆ: ದಿನಕ್ಕೆ 7-8 ಗಂಟೆಗಳ ಕಾಲ ಗಾಢವಾದ ನಿದ್ರೆ ಅತ್ಯಗತ್ಯ. ನಿದ್ರೆಯ ಕೊರತೆಯಾದರೆ ದೇಹದಲ್ಲಿ ಹಸಿವನ್ನು ಹೆಚ್ಚಿಸುವ ಹಾರ್ಮೋನುಗಳು ಬಿಡುಗಡೆಯಾಗಿ ತೂಕ ಹೆಚ್ಚಾಗಬಹುದು.