Select Your Language

Notifications

webdunia
webdunia
webdunia
webdunia

ಗರ್ಭಾವಸ್ಥೆಯ ಎಂಟನೆಯ ತಿಂಗಳಲ್ಲಿ ಸೆಕ್ಸ್ ಮಾಡುವುದು ಅಪಾಯಕಾರಿಯೇ?

ಗರ್ಭಾವಸ್ಥೆಯ ಎಂಟನೆಯ ತಿಂಗಳಲ್ಲಿ ಸೆಕ್ಸ್ ಮಾಡುವುದು ಅಪಾಯಕಾರಿಯೇ?
ಬೆಂಗಳೂರು , ಗುರುವಾರ, 22 ಫೆಬ್ರವರಿ 2018 (06:42 IST)
ಬೆಂಗಳೂರು : ಗರ್ಭಾವಸ್ಥೆಯಲ್ಲಿ ಪ್ರತಿ ಗರ್ಭಿಣಿಗೂ ಹತ್ತು ಹಲವು ಪ್ರಶ್ನೆಗಳು ಹಾಗೂ ಗೊಂದಲಗಳಿರುತ್ತವೆ. ಇದರಲ್ಲಿ ಪ್ರಮುಖವಾದುದು ಗರ್ಭಾವಸ್ಥೆಯ ಯಾವ ಅವಧಿಯವರೆಗೆ ಮಿಲನ ಸುರಕ್ಷಿತವಾಗಿದೆ ಎಂಬುದು. ಅದರಲ್ಲೂ ಎಂಟನೆಯ ತಿಂಗಳಲ್ಲಿ ಇದು ಅಪಾಯಕಾರಿಯೇ ಎಂಬ ಗೊಂದಲ ಎದುರಾಗುತ್ತದೆ.


ಈ ವಿಷಯದ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ ಕಂಡುಕೊಂಡ ಉತ್ತರಗಳು ಹೆಚ್ಚಿನ ಗರ್ಭಿಣಿಯರ ಹರ್ಷಕ್ಕೆ ಕಾರಣವಾಗಿದೆ. ಅದೇನೆಂದರೆ ಎಂಟನೆಯ ತಿಂಗಳಲ್ಲಿಯೂ ಮಿಲನ ಕ್ಷೇಮವಾಗಿದೆ. ಆದರೆ ಈ ಮಿಲನಕ್ಕೆ ವೈದ್ಯರು ಅನುಮತಿ ನೀಡಿದರೆ ಮಾತ್ರ! ಒಂದು ವೇಳೆ ಗರ್ಭವತಿಗೆ ರಕ್ತಸ್ರಾವ, ಜರಾಯು ಜಾರುವಿಕೆ (placenta praevia), ಗರ್ಭಕಂಠ ಸಡಿಲವಾಗಿರುವುದು (cervical weakness), ಗರ್ಭನಾಳದ ಸೋಂಕು (vaginal infections) ಮೊದಲಾದ ತೊಂದರೆಗಳಿದ್ದರೆ ವೈದ್ಯರು ಮಿಲನಕ್ಕೆ ಅನುಮತಿ ನೀಡದೇ ಇರಬಹುದು. ಆದರೆ ಗರ್ಭವತಿಯ ಆರೋಗ್ಯ ಚೆನ್ನಾಗಿದ್ದರೆ ಎಂಟನೆಯ ತಿಂಗಳಲ್ಲಿಯೂ ಮಿಲನದಿಂದ ಯಾವುದೇ ತೊಂದರೆ ಇಲ್ಲ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಪೋಟ ಕುಲ್ಫಿ ಮಾಡುವುದು ಹೇಗೆ ಗೊತ್ತಾ...?