Publish Date: Sun, 04 Aug 2019 (08:52 IST)
Updated Date: Sun, 04 Aug 2019 (08:56 IST)
ಬೆಂಗಳೂರು : ಶೇವ್ ಮಾಡಿದರೆ ಪುರುಷರ ಮುಖ ಅಂದವಾಗ ಕಾಣುವುದು ಸಹಜ. ಆದರೆ ಅದರಿಂದ ಅಲರ್ಜಿಯಾದರೆ ಮಾತ್ರ ಅದು ಮುಖದ ಅಂದವನ್ನೇ ಕೆಡಿಸಿಬಿಡುತ್ತದೆ. ಹಾಗಾಗಿ ಅಂತ ಸಮಸ್ಯೆಗಳಿಂದ ದೂರವಿರಬೇಕು ಅಂದ್ರೆ ಶೇವ್ ಮಾಡಿದ ನಂತರ ಹೀಗೆ ಮಾಡಿ.
ಶೇವ್ ಮಾಡುವಾಗ ರಕ್ತ ಬರುತ್ತಿದ್ದರೆ ಲೋಳೆರಸ ಬಳಸಬೇಕು. ಇದು ಉರಿ ಕಡಿಮೆ ಮಾಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ಸೇರದಂತೆ ಮಾಡುತ್ತದೆ. ಹೀಗಾಗಿ ಶೇವ್ ಮಾಡಿದ ಬಳಿಕ ಲೋಳೆರಸ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ಮುಖ ತೊಳೆಯಬೇಕು.
ಯಾವುದೇ ಕಾರಣಕ್ಕೂ ಪ್ರತಿದಿನ ಶೇವ್ ಮಾಡಬಾರದು. ವಾರಕ್ಕೆ 2 ಅಥವಾ ಶೇವ್ ಮಾಡಿಕೊಂಡರೆ ಉತ್ತಮ. ಸೂಕ್ಷ್ಮ ಚರ್ಮವಾಗಿದ್ದರೆ ಶೇವ್ ಮಾಡಿದ ಬಳಿಕ ನವೆ ಅಥವಾ ಗುಳ್ಳೆಗಳು ಏಳುವ ಸಾಧ್ಯತೆ ಇರುತ್ತದೆ. ಸೂಕ್ಷ್ಮ ಚರ್ಮದವರಾದರೆ ರಾತ್ರಿ ಮಲಗುವುದಕ್ಕೂ ಮುನ್ನ ಹರಳೆಣ್ಣೆಯನ್ನು ಗಡ್ಡದ ಸುತ್ತ ಹಚ್ಚಿಕೊಳ್ಳಬೇಕು. ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದರೆ ಕೆಲವು ಸಮಸ್ಯೆಗೆ ಪರಿಹಾರ ಸಿಗುತ್ತದೆ.