Select Your Language

Notifications

webdunia
webdunia
webdunia
webdunia

ಅವನ ಜೊತೆ ಮದುವೆಯಾದ್ರೆ ಆ ಸುಖ ಸಿಗುತ್ತಾ?

ಅವನ ಜೊತೆ ಮದುವೆಯಾದ್ರೆ ಆ ಸುಖ ಸಿಗುತ್ತಾ?
ಬೆಂಗಳೂರು , ಶನಿವಾರ, 3 ಆಗಸ್ಟ್ 2019 (15:23 IST)
ಪ್ರಶ್ನೆಸರ್,  ಮದುವೆಗೆ ಹುಡುಗನನ್ನು ನಿಶ್ಚಯ ಮಾಡಿದ್ದಾರೆ. ನಮ್ ಸಂಬಂಧಿಕರಲ್ಲೇ ಹುಡುಗನನ್ನು ಮನೆಯವರು ಹುಡುಕಿದ್ದಾರೆ. ಆದರೆ ನನ್ ಸಮಸ್ಯೆ ಏನೆಂದರೆ ನಾನು 85 ಕೆಜಿ ತೂಕ ಇದ್ದೀನಿ.  

ನಾನು ಮದುವೆಯಾಗಬೇಕೆಂದಿರುವ ಹುಡುಗ 55 ಕೆಜಿ ಇದ್ದಾನೆ. ಆದರೆ ನಾನು ಮದುವೆಯಾದ ಮೇಲೆ ಅವನೊಂದಿಗೆ ಸುಖ ಜೀವನ ನಡೆಸಬಹುದೇ? ತಿಳಿಸಿ.

ಉತ್ತರ: ನೀವು ಉತ್ತಮವಾದ ಪ್ರಶ್ನೆ ಕೇಳಿದ್ದೀರಿ. ಬಹುತೇಕ ದಪ್ಪ ಇರುವ ಹುಡುಗಿಯರು ಮತ್ತು ಹುಡುಗರಲ್ಲಿ ಇಂಥದ್ದೇ ಸಮಸ್ಯೆ ಕಾಡುತ್ತಿರುತ್ತದೆ. ಮದುವೆ ಸಮಯದಲ್ಲಿ ಮಾತ್ರ ಅದೂ ಕೊನೆ ಘಳಿಗೆಯಲ್ಲಿ ಸ್ಲಿಮ್ ಆಗಲು ಹಲವು ಕಸರತ್ತುಗಳನ್ನ ಮಾಡೋದನ್ನು ನಾವೆಲ್ಲ ನೋಡಿದ್ದೇವೆ. ನೀವು ದಪ್ಪ ಇದ್ದು, ನಿಮ್ಮ ಪತಿ ಸ್ಲಿಮ್ ಆಗಿದ್ದರೂ ನಿಮ್ಮ ಸಂಸಾರ ಸುಖವಾಗಿ ಸಾಗುವುದರಲ್ಲಿ ಅನುಮಾನ ಇಟ್ಟುಕೊಳ್ಳಬೇಡಿ.

ದಪ್ಪ ಇರೋದನ್ನು ನೀವು ಒಪ್ಪಿಕೊಂಡಿದ್ದೀರಿ ಅಲ್ಲಿಗೆ ಅರ್ಧ ಸಮಸ್ಯೆಯನ್ನು ನೀವಾಗಿಯೇ ಬಗೆಹರಿಸಿಕೊಂಡಿದ್ದೀರಿ ಅಂತ ಅರ್ಥ. ಇನ್ನ ಸ್ಲಿಮ್ ಆಗಲು ದೈಹಿಕ ಕಸರತ್ತು, ಆಹಾರದ ಮೇಲೆ ನಿಯಂತ್ರಣ ಸಾಧಿಸಿ ಹಾಗೂ ವೈದ್ಯರ ಸಲಹೆ ಪಡೆದುಕೊಂಡು ತೆಳ್ಳಗಾಗಲು ಪ್ರಯತ್ನಿಸಿ.



Share this Story:

Follow Webdunia kannada

ಮುಂದಿನ ಸುದ್ದಿ

ಆ ವಿಧವೆ ಗರ್ಭಿಣಿಯಾಗಲು ಯಾರು ಕಾರಣ?