Select Your Language

Notifications

webdunia
webdunia
webdunia
webdunia

ನಿಮ್ಮ ಮಕ್ಕಳು ಓದಿನಲ್ಲಿ ಆಸಕ್ತಿ ತೋರದಿದ್ದರೆ ಈ ದೇವಾಲಯಕ್ಕ ಕರೆದುಕೊಂಡು ಬನ್ನಿ

ನಿಮ್ಮ ಮಕ್ಕಳು ಓದಿನಲ್ಲಿ ಆಸಕ್ತಿ ತೋರದಿದ್ದರೆ ಈ ದೇವಾಲಯಕ್ಕ ಕರೆದುಕೊಂಡು ಬನ್ನಿ
ಬೆಂಗಳೂರು , ಭಾನುವಾರ, 4 ಆಗಸ್ಟ್ 2019 (08:36 IST)
ಬೆಂಗಳೂರು : ತಮ್ಮ ಮಕ್ಕಳು ಚೆನ್ನಾಗಿ ಓದಬೇಕು ಎಂಬ ಹಂಬಲ ಹಲವು ತಂದೆತಾಯಿಗೆ ಇರುತ್ತದೆ. ಆದರೆ ಮಕ್ಕಳು ಓದುವುದರಲ್ಲಿ ಆಸಕ್ತಿ ತೋರದೆ ಹಿಂದೆ ಉಳಿದರೆ ಪೋಷಕರಿಗೆ ತುಂಬಾ ಬೇಸರವಾಗುತ್ತದೆ. ಅಂತವರು ಚಿಂತಿಸುವ ಬದಲು ತಮ್ಮ ಮಕ್ಕಳನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಬನ್ನಿ.




ತ್ರಿಕೋಟೇಶ್ವರ ದೇವಾಲಯ. ಇದು ಗದಗ ಶಹರದಲ್ಲಿದೆ. ಈ ದೇವಾಲಯದಲ್ಲಿ ಎರಡು ಗರ್ಭಗುಡಿಗಳಿದ್ದು ಪೂರ್ವಾಭಿಮುಖವಾಗಿರುವ ದೊಡ್ಡ ಗುಡಿಯಲ್ಲಿ ಮೂರು ಲಿಂಗಗಳಿವೆ ಆದ್ದರಿಂದ ಇದಕ್ಕೆ ತ್ರಿಕೂಟಾಚಲ ಎಂದು ಹೆಸರು ಬಂದಿದೆ. ಇದರ ಮುಂಭಾಗದಲ್ಲಿ ಅರ್ಧ ಮಂಟಪ ಮತ್ತು ಅದರ ಎದುರು ದೊಡ್ಡದಾದ ತೆರೆದ ಮಂಟಪ ಇವೆ. ದೇವಸ್ಥಾನದ ಒಳಭಾಗದಲ್ಲಿ ಸರಸ್ವತಿ ದೇವಸ್ಥಾನ ಇದೆ ಇದು ಗರ್ಭಗೃಹ ಅರ್ಧಮಂಟಪ ಹಾಗೂ ತೆರೆದ ಮುಖಮಂಟಪವನ್ನು ಹೊಂದಿದೆ.


ಈ ದೇವಾಲಯಕ್ಕೆ ಬಂದು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರೆ ತುಂಬಾ ಶುಭಕರವಾಗುತ್ತದೆ ಮತ್ತು ಓದುವ ಮಕ್ಕಳು ಮಂದವಿದ್ದರೆ ಇಲ್ಲಿ ಬಂದು ಪೂಜೆ ಮಾಡಿಸಿಕೊಂಡು ಹೋದರೆ ಉತ್ತಮವಾದ ಜ್ಞಾನ ಬರುತ್ತದೆ ಎಂಬ ನಂಬಿಕೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ದಾನ ಮಾಡಿದರೆ ಯಮದೂತರ ಭಯದಿಂದ ದೂರವಾಗಬಹುದು!