Select Your Language

Notifications

webdunia
webdunia
webdunia
webdunia

ನಾನು ನನ್ನ ತಾಯಿಯ ಕಡೆಗೆ ಲೈಂಗಿಕವಾಗಿ ಆಕರ್ಷಿತನಾಗುತ್ತಿದ್ದೇನೆ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ

ನಾನು ನನ್ನ ತಾಯಿಯ ಕಡೆಗೆ ಲೈಂಗಿಕವಾಗಿ ಆಕರ್ಷಿತನಾಗುತ್ತಿದ್ದೇನೆ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ
ಬೆಂಗಳೂರು , ಸೋಮವಾರ, 18 ಮಾರ್ಚ್ 2019 (10:49 IST)
ಬೆಂಗಳೂರು : ನಾನು 18 ವರ್ಷದವನಾಗಿದ್ದು, ಇಂಜಿನಿಯರ್ ಕಲಿಯುತ್ತಿದ್ದೇನೆ. ನಾನು ನನ್ನ ತಾಯಿಯ ಕಡೆಗೆ ಲೈಂಗಿಕವಾಗಿ ಆಕರ್ಷಿತನಾಗುತ್ತಿದ್ದೇನೆ. ಇದರಿಂದ ನನಗೆ ಯಾವುದರ ಮೇಲೂ ಗಮನಹರಿಸಲು ಆಗುತ್ತಿಲ್ಲ. ನನಗನಿಸುತ್ತದೆ ನಾನು ಅವಳನ್ನು  ತುಂಬಾ  ಪ್ರೀತಿಸುತ್ತಿದ್ದೇನೆ ಎಂದು. ನನ್ನ ತಾಯಿಯ ವಾಶ್ ರೂಂ ನಲ್ಲಿ ರಂಧ್ರವನ್ನು ಸಹ  ಕೊರೆದಿದ್ದೇನೆ. ಇದು ತಪ್ಪು ಎಂದು ನನಗೆ ಗೊತ್ತು. ಆದರೆ ಇದಕ್ಕೆ ಪರಿಹಾರವನ್ನು ಕಂಡುಹಿಡಿಯಲು ನನಗೆ ಆಗುತ್ತಿಲ್ಲ. ದಯವಿಟ್ಟು ನನಗೆ ಮಾರ್ಗದರ್ಶನ ನೀಡಿ.


ಉತ್ತರ : ಚಿಕ್ಕ ವಯಸ್ಸಿನಲ್ಲಿ ಅನೇಕ ಹುಡುಗರು ತಮ್ಮ ತಾಯಿಯ ಕಡೆಗೆ ಆಕರ್ಷಿತರಾಗುವುದು ಸಹಜ. ಅನೇಕ ಮಂದಿ ಈ ಆಕರ್ಷಣೆಯನ್ನು ನಿಗ್ರಹಿಸುತ್ತಾರೆ. ಕೆಲವರು ಆ ಭಾವನೆಯನ್ನು ಹಾಗೇ ಉಳಿಸಿಕೊಂಡು ವಯಸ್ಕರಾದ ಮೇಲೂ ಮುಂದುವರಿಸುತ್ತಾರೆ. ನಿಮ್ಮ ತಾಯಿಯ ಮೇಲಿನ ನಿಮ್ಮ ಆಕರ್ಷಣೆ ಅಸ್ವಾಭಾವಿಕ. ಇದನ್ನು ನೀವು ಸರಿಯಾದ ಸಮಯದಲ್ಲಿ ಪರಿಹರಿಸಕೊಳ್ಳದೇ ಇದ್ದರೆ ಭವಿಷ್ಯದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.


ನಿಮಗೆ ನೀವು ಈ ರೀತಿ ಭಾವನೆ ಹೊಂದಿರುವುದು  ತಪ್ಪು ಎಂಬುದನ್ನು ಅರ್ಥಮಾಡಿಕೊಂಡಿದ್ದರಿಂದ  ನಿಮ್ಮ ಸಮಸ್ಯೆ ಪರಿಹಾರವನ್ನು ಕಂಡುಕೊಳ್ಳಬಹುದು. ನೀವು ಈ ಕೆಟ್ಟ ಭಾವನೆಯಿಂದ ಹೊರಬರಬೇಕಾದರೆ ನೀವು ನಿಮ್ಮ ಕೆಟ್ಟ ಅಭ್ಯಾಸಗಳನ್ನು (ತಾಯಿಯ ವಾಶ್ ರೂಂ ನಲ್ಲಿ ರಂಧ್ರ ಕೊರೆಯುವುದನ್ನು) ನಿಲ್ಲಿಸಿ. ನೀವು ನಿಮ್ಮನ್ನು ಧನಾತ್ಮಕ ಮತ್ತು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಜಿಮ್ ಗೆ ಸೇರಿಕೊಳ್ಳಿ, ಕ್ರೀಡೆ, ಪ್ರಯಾಣ, ಮುಂತಾದ ಚಟುವಟಿಕೆಗಳಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳಿ.


ನೀವು ನಿಮ್ಮ ತಾಯಿಯನ್ನು ಗೌರವಿಸಬೇಕು. ಒಂದು ವೇಳೆ ಇದು ಸಾಧ್ಯವಾಗದೇ ಹೋದರೆ ತಕ್ಷಣ ನೀವು ಲೈಂಗಿಕ ಸಲಹೆಗಾರರನ್ನು ಭೇಟಿ ಮಾಡುವುದು ಅತ್ಯಗತ್ಯ. ಮನೋವೈದ್ಯರು ನೀಡುವ ಚಿಕಿತ್ಸೆಯಿಂದ ನಿಮ್ಮ ಸಮಸ್ಯೆ ನಿವಾರಿಸಲು ಸಹಾಯವಾಗುತ್ತದೆ. ಪ್ರತಿ ಸಂಬಂಧವು ತನ್ನದೇ ಆದ ಭಾವನಾತ್ಮಕ, ದೈಹಿಕ, ಸಾಮಾಜಿಕ ಗಡಿಗಳನ್ನು ಹೊಂದಿದೆ. ಆದ್ದರಿಂದ ನೀವು ನಿಮ್ಮ ಭಾವನೆಯನ್ನು ಹತೋಟಿಯಲ್ಲಿಟ್ಟುಕೊಳ‍್ಳುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಸ್ನೇಹಿತ ಜೊತೆಗಿನ ನನ್ನ ಅನೈತಿಕ ಸಂಬಂಧದ ಬಗ್ಗೆ ಪತಿಗೆ ತಿಳಿಸಲೇ? ಬೇಡವೇ? ದಯವಿಟ್ಟು ತಿಳಿಸಿ