Select Your Language

Notifications

webdunia
webdunia
webdunia
webdunia

ನನ್ನ ಪತ್ನಿಯಿಂದ ನನಗೆ ಲೈಂಗಿಕ ಸುಖ ಸಿಗುತ್ತಿಲ್ಲ. ಏನು ಮಾಡಲಿ?

ನನ್ನ ಪತ್ನಿಯಿಂದ ನನಗೆ ಲೈಂಗಿಕ ಸುಖ ಸಿಗುತ್ತಿಲ್ಲ. ಏನು ಮಾಡಲಿ?
ಬೆಂಗಳೂರು , ಭಾನುವಾರ, 17 ಮಾರ್ಚ್ 2019 (14:19 IST)
ಬೆಂಗಳೂರು : ಪ್ರಶ್ನೆ : ನನಗೆ ಮದುವೆಯಾಗಿ 20 ವರ್ಷವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ನಾವಿಬ್ಬರು ಒಬ್ಬರನೊಬ್ಬರು ತುಂಬಾ ಪ್ರೀತಿಸುತ್ತೇವೆ. ಆದರೆ ನನಗೆ ಮದುವೆಯಾದಾಗಿನಿಂದ ಸೆಕ್ಸ್  ವಿಚಾರದಲ್ಲಿ  ತೃಪ್ತಿ ಸಿಗುತ್ತಿಲ್ಲ. ಅಲ್ಲದೇ ತನ್ನ ಪತ್ನಿ ನನಗೆ ಕಿಸ್ ಕೊಡಲು ಸಹ ಇಷ್ಟಪಡುತ್ತಿಲ್ಲ. ನಾನು ಪ್ರತಿದಿನ  ಸೆಕ್ಸ್ ಮಾಡಲು ಇಷ್ಟಪಡುತ್ತೇನೆ. ಆದರೆ ನನ್ನ ಪತ್ನಿಗೆ ಅದು ಇಷ್ಟವಿಲ್ಲ. ಕೆಲವೊಮ್ಮೆ ನಾನು ಬೇಸರಗೊಂಡಾಗ ನನಗೆ ಸಮಾಧಾನ ಮಾಡಲು ಸೆಕ್ಸ್ ಮಾಡುತ್ತಾಳೆ. ಆಕೆಯ ಜೊತೆ  ವೈದ್ಯರು ಹಾಗೂ ಕುಟುಂಬದವರು ಮಾತನಾಡಿದರೂ ಏನು ಪ್ರಯೋಜನವಾಗಲಿಲ್ಲ. ಆದ್ದರಿಂದ ನಾನು ಆಕೆಯನ್ನು ಬಿಟ್ಟುಬಿಡುವ ನಿರ್ಧಾರ ಮಾಡಿದ್ದೇನೆ. ಹಾಗೇ  ನನ್ನ ಉಳಿದ ಜೀವನವನ್ನು ಸೆಕ್ಸ್ ಇಷ್ಟಪಡುವವರ ಜೊತೆ ಕಳೆಯಲು ನಿರ್ಧರಿಸಿದ್ದೇನೆ. ಈ ವಿಚಾರದಲ್ಲಿ ನನಗೆ ಸ್ವಲ್ಪ ಗೊಂದಲವಿದೆ. ದಯವಿಟ್ಟು ಪರಿಹಾರ ತಿಳಿಸಿ.

ಉತ್ತರ : ಮೊದಲನೇಯದಾಗಿ ಆಕೆಗೆ ಹೈಪೋಥೈರಾಯ್ಡಿಸಮ್ ನಂತಹ ಹಾರ್ಮೋನ್ ಅಸಮತೋಲನ ಸಮಸ್ಯೆ ಇದೆಯೇ ಅಥವಾ ಆಕೆಗೆ ಋತುಬಂಧ ಸಮೀಪಿಸುತ್ತಿದೆಯೇ? ಎಂದುದನ್ನು ತಿಳಿಯಲು ವೈದ್ಯರ ತಪಾಸಣೆಗೆ ಒಳಪಡಿಸಿ. ಹಾಗೇ ಆಕೆಗೆ ಲೈಂಗಿಕ ಸಮಸ್ಯೆಗಳಾದ ಖಿನ್ನತೆ, ಆತಂಕ, ಒತ್ತಡವಿದೆಯೇ ಅಥವಾ ಆಕೆಗೆ ಈ ಹಿಂದೆ ಸೆಕ್ಸ್ ಗೆ ಸಂಬಂಧಪಟ್ಟ ಯಾವುದಾದರೂ  ಕಹಿ ಘಟನೆಗಳ ಅನುಭವವಾಗಿದೆಯೇ? ಎಂಬುದನ್ನು ತಿಳಿಯಲು ಮನೋವೈದ್ಯರನ್ನು ಸಂಪರ್ಕಿಸುವುದು ಉತ್ತಮ.

 

ನೀವು ಆಕೆಯನ್ನು ಪ್ರೀತಿಸುತ್ತಿದ್ದೀರಾ ಎಂಬುದನ್ನು ಮೊದಲು ಖಚಿತಪಡಇಸಿಕೊಳ್ಳಿ. ಅದಲ್ಲದೇ ಯಾವುದೇ ವೈದ್ಯಕೀಯ ಅಥವಾ ಮಾನ್ಯ ಕಾರಣವಿಲ್ಲದೇ ಮದುವೆಯಲ್ಲಿ ಲೈಂಗಿಕತೆಯ ನಿರಾಕರಣೆ ವಿಚ್ಚೇದನ ಪಡೆಯಲು ಸಾಧ್ಯವಿಲ್ಲ. ಈ ಹಂತದಲ್ಲಿ  ಜೀವನದ ಬಗ್ಗೆ ಆಯ್ಕೆ ಮಾಡುವುದು ಸುಲಭವಲ್ಲ. ಆದ್ದರಿಂದ ನೀವು ಸ್ವಲ್ಪ ಸಮಯ ತೆಗೆದುಕೊಂಡು ವೃತ್ತಿಪರರಲ್ಲಿ ನಿಮ್ಮ ಪರಿಸ್ಥಿತಿಯ ಬಗ್ಗೆ ತಿಳಿಸಿ ಅವರ ಅಭಿಪ್ರಾಯವನ್ನು ಕೇಳಿದ ನಂತರ ನಿರ್ಧಾರ ಮಾಡಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ರಕ್ತದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ ಈ ನೈಸರ್ಗಿಕವಾದ ಜ್ಯೂಸ್