Select Your Language

Notifications

webdunia
webdunia
webdunia
webdunia

ಪತಿಯ ಸ್ನೇಹಿತ ಜೊತೆಗಿನ ನನ್ನ ಅನೈತಿಕ ಸಂಬಂಧದ ಬಗ್ಗೆ ಪತಿಗೆ ತಿಳಿಸಲೇ? ಬೇಡವೇ? ದಯವಿಟ್ಟು ತಿಳಿಸಿ

ಪತಿಯ ಸ್ನೇಹಿತ ಜೊತೆಗಿನ  ನನ್ನ ಅನೈತಿಕ ಸಂಬಂಧದ ಬಗ್ಗೆ ಪತಿಗೆ ತಿಳಿಸಲೇ? ಬೇಡವೇ? ದಯವಿಟ್ಟು ತಿಳಿಸಿ
ಬೆಂಗಳೂರು , ಸೋಮವಾರ, 18 ಮಾರ್ಚ್ 2019 (10:45 IST)
ಬೆಂಗಳೂರು : ಪ್ರಶ್ನೆ : ನನಗೆ ಮದುವೆಯಾಗಿ 4 ವರ್ಷವಾಗಿದೆ. ಆದರೆ ನನ್ನ ಹಾಗೂ ನನ್ನ ಪತಿಯ ನಡುವೆ ಸಣ್ಣ ವಿಷಯಕ್ಕೂ ಜಗಳವಾಗುತ್ತಿದೆ. ನಮ್ಮಿಬ್ಬರ ನಡುವೆ ಹೊಂದಾಣಿಕೆ ಇಲ್ಲ. ಆದರೆ ನನ್ನ ಪತಿಯ ಫ್ರೆಂಡ್ ನನ್ನ ಮೇಲೆ ಮೋಹಗೊಂಡಿದ್ದಾನೆ. ಆತನಿಗೆ ಮದುವೆಯಾಗಿಲ್ಲ. ನಾವು ಒಳ್ಳೆಯ ಸ್ನೇಹಿತರಾಗಿದ್ದೇವು. ಆದರೆ ಇತ್ತೀಚೆಗೆ ನಾವಿಬ್ಬರು ಒಂದು ಬಾರಿ ಲೈಂಗಿಕ ಸಂಪರ್ಕ ಹೊಂದಿದ್ದೇವೆ. ಈಗ ಈ ಬಗ್ಗೆ ನಾಮ್ಮಿಬ್ಬರು  ಪಶ್ಚತಾಪ ಪಡುತ್ತಿದ್ದೇವೆ. ಈ ವಿಚಾರದ ಬಗ್ಗೆ ನನ್ನ ಪತಿಯ ಬಳಿ ತಪ್ಪೊಪ್ಪಿಕೊಳ್ಳುವುದೇ? ಬೇಡವೇ? ಎಂಬುದು ತಿಳಿಯುತ್ತಿಲ್ಲ. ನಾನು ನನ್ನ ಪತಿಯನ್ನು ತುಂಬಾ ಪ್ರೀತಿಸುತ್ತೇನೆ. ಅವರನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ಅವರ  ಫ್ರೆಂಡ್ ಕೂಡ ನಮ್ಮ ಸಂಬಂಧವನ್ನು ಕಡಿದುಕೊಂಡು ದೂರ ಹೋಗುವುದಾಗಿ ಹೇಳಿದ್ದಾರೆ. ಈಗ ನಾನು ಏನು ಮಾಡಲಿ. ದಯವಿಟ್ಟು ತಿಳಿಸಿ.

ಉತ್ತರ : ನಿಮ್ಮ ಪತಿಯ ಮೇಲಿನ ಪ್ರೀತಿಯಿಂದ ಎಲ್ಲವನ್ನು ಸರಿಪಡಿಸಿಕೊಳ್ಳಬೇಕು ಎಂಬ ನಿಮ್ಮ ಭಾವನೆಯನ್ನು ಪ್ರಶಂಸಿಸುತ್ತೇನೆ. ಆದರೆ ನೀವು ನಡೆದ ಈ ಘಟನೆಯನ್ನು ಮರೆಯುವುದೇ ಉತ್ತಮ. ಯಾಕೆಂದರೆ ಈ ಘಟನೆ ನಿಮ್ಮ ಸಂಬಂಧವನ್ನು ಹಾಳುಮಾಡುವಂತಹ ಒಂದು ದೊಡ್ಡ ಸಮಸ್ಯೆಯಾಗಿದೆ. ಕೆಲವೊಮ್ಮ ಸತ್ಯ ಹೇಳುವುದು ತನ್ನದೇ ಆದ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ನಿಮ್ಮಿಬ್ಬರು ಒಟ್ಟಾಗಿ ಅನ್ಯೋನ್ಯವಾಗಿರಿ. ಇದರಿಂದ ಈ ಸಮಸ್ಯೆಯನ್ನು ಮರೆಯಬಹುದು. ಜೊತೆಗೆ ಮತ್ತೆ  ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂಬುದು ನನ್ನ ಅಭಿಪ್ರಾಯ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರಲ್ಲಿ ಅಸಹ್ಯವಾಗಿ ಕಾಣುವ ಸ್ತನದ ಸಮಸ್ಯೆಗೆ ಪರಿಹಾರವೇನು?