ನನ್ನ ಗಂಡ ಕದ್ದು ಮುಚ್ಚಿ ಹಳೆಯ ಗರ್ಲ್ ಫ್ರೆಂಡ್ ಜತೆ ಲಲ್ಲೆ ಹೊಡೆಯುತ್ತಾರೆ!

ಶುಕ್ರವಾರ, 9 ಆಗಸ್ಟ್ 2019 (09:03 IST)
ಬೆಂಗಳೂರು: ಪತ್ನಿಯಿದ್ದರೂ ಹಳೆಯ ಗರ್ಲ್ ಫ್ರೆಂಡ್ ಜತೆ ಫೋನ್ ನಲ್ಲಿ ಕದ್ದು ಮುಚ್ಚಿ ಲಲ್ಲೆ ಹೊಡೆಯುವ ಗಂಡನನ್ನು ತಡೆಯುವುದು ಹೇಗೆ?


ಇಂತಹ ಸಂದರ್ಭದಲ್ಲಿ ಪತ್ನಿ ಮೊದಲು ಗಂಡನ ಜತೆಗೆ ಕೂತು ತಾನು ನಿಮ್ಮ ಜೀವನಕ್ಕೆ ಎಷ್ಟು ಮುಖ್ಯ ಎಂದು ಕೇಳಬೇಕು. ಒಂದು ವೇಳೆ ಮುಖ್ಯವಾದರೆ ಬೇರೆ ಹುಡುಗಿಯ ಜತೆ ಮಾತನಾಡುವ ಅಗತ್ಯವೇನಿದೆ ಎಂಬುದನ್ನು ಕೇಳಿ ತಿಳಿದುಕೊಳ್ಳಬೇಕು. ಬೇರೆ ಹುಡುಗಿಯ ಜತೆ ಕೂತು ಮಾತನಾಡುವುದರಿಂದ ತನಗೆ ನೋವಾಗುತ್ತದೆ ಎಂಬುದನ್ನು ಅರ್ಥ ಮಾಡಿಸಬೇಕು.

ಒಂದು ವೇಳೆ ಆತ ಚಾಳಿ ಬಿಡದಿದ್ದರೆ ಕೊಂಚ ಸ್ಟ್ರಿಕ್ಟ್ ಆಗಲೇಬೇಕು. ಒಂದು ವೇಳೆ ಈ ಚಾಳಿ ಬಿಡದಿದ್ದರೆ ನಾನೇ ನಿಮ್ಮನ್ನು ಬಿಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟು ನೋಡಬಹುದು. ಸಾಧ್ಯವಾದರೆ ಆ ಹುಡುಗಿ ಜತೆಗೂ ಮಾತನಾಡಿ ತಮ್ಮಿಬ್ಬರಿಂದ ದೂರವಿರುವಂತೆ ಖಡಕ್ ಆಗಿ ಹೇಳಬಹುದು. ಇದೆಲ್ಲವೂ ವರ್ಕೌಟ್ ಆಗದೇ ಇದ್ದಾಗ ಹಿರಿಯರ ಸಲಹೆ ಪಡೆಯುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತಲೆಹೊಟ್ಟಿನಿಂದ ಹಣೆಯ ಮೇಲಾದ ಗುಳ್ಳೆಗಳನ್ನು ನಿವಾರಿಸಲು ಇದನ್ನು ಹಚ್ಚಿ