Webdunia - Bharat's app for daily news and videos

Install App

ಹರೆಯದ ಮಗುವಿಗೆ ಗುಪ್ತಾಂಗದ ಮೇಲೆಯೇ ಆಸಕ್ತಿ ಜಾಸ್ತಿ, ಏನು ಮಾಡಲಿ?

Webdunia
ಬುಧವಾರ, 27 ಮಾರ್ಚ್ 2019 (12:28 IST)
ಬೆಂಗಳೂರು: ಮಕ್ಕಳು ದೊಡ್ಡವರಾದಂತೆ ಅವರ ಬಳಿ ಲೈಂಗಿಕತೆ ಬಗ್ಗೆ ಹೇಗೆ ತಿಳಿ ಹೇಳುವುದು ಎಂಬುದೇ ಪೋಷಕರಿಗೆ ದೊಡ್ಡ ಚಿಂತೆಯಾಗುತ್ತದೆ. ಆದರೆ ಅವರ ಕೆಲವೊಂದು ದೇಹ ಬದಲಾವಣೆ ಚಿಂತೆ ಮತ್ತಷ್ಟು ಹೆಚ್ಚಿಸುತ್ತದೆ.


ಹರೆಯದ ಮಕ್ಕಳು ತಮಗರಿವಿಲ್ಲದಂತೆಯೇ ತಮ್ಮ ದೇಹದಲ್ಲಾಗುವ ಬದಲಾವಣೆ ಬಗ್ಗೆ ಅಚ್ಚರಿಗೊಳಗಾಗುತ್ತಾರೆ. ಪದೇ ಪದೇ ಗುಪ್ತಾಂಗದ ಕಡೆಗೆ ಕೈ ತೂರುವುದು ಮಾಡುವ ಅಭ್ಯಾಸವೂ ಇದರಲ್ಲಿ ಒಂದು.

ಇಂತಹ ಸಮಸ್ಯೆಗಳನ್ನು ಎದುರಿಸುವುದು ಹೇಗೆ? ಅವರಿಗೆ ಹೇಗೆ ತಿಳಿ ಹೇಳುವುದು ಎಂದು ಪೋಷಕರು ತಲೆಕೆಡಿಸಿಕೊಳ್ಳುತ್ತಾರೆ. ಮೊದಲನೆಯದಾಗಿ ಇದು ಅಸಹಜ ಕ್ರಿಯೆ ಅಲ್ಲ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಲೈಂಗಿಕತೆ ಬಗ್ಗೆ ಅವರಿಗೇ ಗೊತ್ತಿಲ್ಲದಂತೆ ಅವರಾಗಿಯೇ ತಮ್ಮ ದೇಹದಲ್ಲಾಗುವ ಬದಲಾವಣೆಯಿಂದ ಅಚ್ಚರಿಗೊಳಗಾಗಿ ಇಂತಹ ಕೆಲವು ಚಟುವಟಿಕೆ ಮಾಡುತ್ತಿರುತ್ತಾರೆ.

ಹೀಗಾಗಿ ಇದನ್ನು ಬಹಿರಂಗವಾಗಿ ಮಾಡಬೇಡ. ಇದರಿಂದ ಅಸಹ್ಯವಾಗಿ ಕಾಣುತ್ತದೆ ಎನ್ನಬೇಕು. ಆದರೆ ಅದು ತಪ್ಪಲ್ಲ ಎನ್ನುವುದನ್ನೂ ಮನವರಿಕೆ ಮಾಡಬೇಕು. ಲೈಂಗಿಕತೆ ಬಗ್ಗೆ ನೇರವಾಗಿ ಹೇಳಲು ಸಾಧ್ಯವಾಗದಿದ್ದರೆ ಪರೋಕ್ಷವಾಗಿ ತಿಳಿ ಹೇಳಬೇಕು. ಈ ಭಾಗವನ್ನು ಬೇರೆಯವರಿಗೆ ಸ್ಪರ್ಶಿಸಲು ಬಿಡಬಾರದು ಎನ್ನುವುದನ್ನು ಹೇಳಬೇಕು. ಯಾವುದು ಗುಡ್ ಟಚ್, ಯಾವುದು ಬ್ಯಾಡ್ ಟಚ್, ಯಾವುದು ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಮಾಡಬೇಕು ಎನ್ನುವುದನ್ನು ಅವರಿಗೆ ಸೂಕ್ಷ್ಮವಾಗಿ ತಿಳಿಹೇಳಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

ಮುಂದಿನ ಸುದ್ದಿ