ಬೇಸಿಗೆಯಲ್ಲಿ ಅಡುಗೆ ಮನೆಯಲ್ಲೇ ಗಿಡಗಳಿಗೆ ನೀರು ಉತ್ಪತ್ತಿ ಮಾಡುವ ವಿಧಾನ

ಮಂಗಳವಾರ, 21 ಮೇ 2019 (08:08 IST)
ಬೆಂಗಳೂರು: ಬೇಸಿಗೆಯಲ್ಲಿ ಅದರಲ್ಲೂ ಹಳ್ಳಿಗಳಲ್ಲಿ ಗಿಡಗಳಿಗೆ ನೀರು ಹಾಕಲೂ ನೀರಿಲ್ಲದ ಪರಿಸ್ಥಿತಿ. ಹಾಗಿರುವಾಗ ನೀರು ಉಳಿತಾಯ ಮಾಡಿ ಗಿಡಗಳಿಗೆ ನೀರು ಉಣಿಸಲು ಒಂದು ಉಪಾಯ ಇಲ್ಲಿದೆ ನೋಡಿ.

 

ನಾವು ಕೈ ತೊಳೆಯಲು, ಪಾತ್ರೆ ತೊಳೆಯಲು ಬಳಸುವ ನೀರಿಗೆ ಲೆಕ್ಕವೇ ಇರುವುದಿಲ್ಲ. ಈ ನೀರನ್ನೇ ಪೋಲಾಗದಂತೆ ನಳ್ಳಿಯ ಕೆಳಗೆ ಪಾತ್ರೆಯೊಂದನ್ನು ಇಟ್ಟುಕೊಂಡು ಪಾತ್ರೆ ಅಥವಾ ಕೈ ತೊಳೆದ ನೀರು ಆ ಪಾತ್ರೆಯೊಳಗೇ ಸಂಗ್ರಹವಾಗುವಂತೆ ನೋಡಿಕೊಂಡರೆ ಆ ನೀರನ್ನು ಪುನರ್ ಬಳಕೆ ಮಾಡಬಹುದು.

ಅದನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಗಿಡಗಳಿಗೆ ಬಳಕೆ ಮಾಡಲು ಉಪಯೋಗಿಸಿದರೆ ನೀರೂ ಪೋಲಾಗದು, ಗಿಡಗಳ ದಾಹವೂ ತೀರುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೊದಲ ರಾತ್ರಿಯ ಆತಂಕಗಳು