ನನ್ನ ಏಳಿಗೆ ನೋಡಿ ಗಂಡ ಅಸೂಯೆ ಪಡ್ತಾನೆ! ಏನು ಮಾಡೋದು?

ಶುಕ್ರವಾರ, 9 ಆಗಸ್ಟ್ 2019 (09:08 IST)
ಬೆಂಗಳೂರು: ವೃತ್ತಿ ಮಾತ್ಸರ್ಯ, ಒಬ್ಬರ ಏಳಿಗೆ ನೋಡಿ ಇನ್ನೊಬ್ಬರು ಅಸೂಯೆಪಡುವ ಸ್ವಭಾವ ಗಂಡ-ಹೆಂಡತಿ ನಡುವೆಯೂ ಇರುವ ಸಾಧ‍್ಯತೆಯಿದೆ.


ಇಂತಹ ಎಷ್ಟೋ ಅಸೂಯೆಯಿಂದಾಗಿ ಎಷ್ಟೋ ಸಂಬಂಧಗಳು ಮುರಿದುಬೀಳುವ ಹಂತಕ್ಕೆ ತಲುಪುವುದೂ ಇದೆ. ಪತಿ ಪತ್ನಿಯ ಏಳಿಗೆ ನೋಡಿ ಅಸೂಯೆ ಪಡುತ್ತಿದ್ದರೆ ಅದಕ್ಕೆ ಆತ ಬೆಳೆದು ಬಂದ ವಾತಾವರಣ, ತನ್ನ ಬಗ್ಗೆ ಇರುವ ಕೀಳರಿಮೆ, ತನ್ನ ಸ್ಥಾನ ಕಡಿಮೆಯಾದರೆ ಎಂಬ ಆತಂಕಗಳು ಕಾರಣವಾಗಬಹುದು.

ಇದಕ್ಕೆ ಮಾಡಬೇಕಾಗಿರುವುದು ಏನೆಂದರೆ ಪತ್ನಿಯಾದವಳು ಪತಿಯ ಜತೆಗೆ ಕೂತು ನೀನು ನನ್ನ ಅಭಿವೃದ್ಧಿಗೆ ಜತೆಯಾಗಿ ನಿಂತರೆ ಮತ್ತು ನನಗೆ ಪ್ರೋತ್ಸಾಹ ಕೊಡುತ್ತಿದ್ದರೆ ನನಗೆ ಉತ್ಸಾಹ ಹೆಚ್ಚುತ್ತದೆ. ನಿನ್ನ ಪ್ರೋತ್ಸಾಹ ನನಗೆ ಬೇರೆಯವರದಕ್ಕಿಂತ ಮುಖ್ಯ ಎಂದು ಮಾತುಕತೆ ಮೂಲಕ ಮನದಟ್ಟು ಮಾಡಬೇಕು.

ಕೆಲವೊಮ್ಮೆ ನಿಮಗರಿವಿಲ್ಲದಂತೆಯೇ ಆತನನ್ನು ಅವಗಣಿಸುತ್ತಿರಬಹುದು. ಎಲ್ಲಾ ನಿರ್ಧಾರಗಳಲ್ಲಿ, ಸಂತೋಷ, ದುಃಖಗಳಲ್ಲಿ ಆತನನ್ನೂ ಸಹಭಾಗಿ ಮಾಡಿ. ಆಗ ನೀನೂ ನನ್ನ ಏಳಿಗೆಗೆ ಪ್ರಮುಖ ಕಾರಣ ಎಂದು ಹೇಳುತ್ತಿರಿ. ಇದರಿಂದ ಆತನೂ ನಿಮ್ಮ ಮೇಲೆ ಅಸೂಯೆಪಡುವ ಮೊದಲು ಹಿಂಜರಿಯಬಹುದು!

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನನ್ನ ಗಂಡ ಕದ್ದು ಮುಚ್ಚಿ ಹಳೆಯ ಗರ್ಲ್ ಫ್ರೆಂಡ್ ಜತೆ ಲಲ್ಲೆ ಹೊಡೆಯುತ್ತಾರೆ!