Select Your Language

Notifications

webdunia
webdunia
webdunia
webdunia

ಆಯುರ್ವೇದದ ಪ್ರಕಾರ ಶುಗರ್ ಇದ್ದವರು ಗೋಧಿಯನ್ನು ಹೇಗೆ ಸೇವನೆ ಮಾಡಬೇಕು

Wheat Grain

Krishnaveni K

ಬೆಂಗಳೂರು , ಶನಿವಾರ, 7 ಡಿಸೆಂಬರ್ 2024 (10:47 IST)
Photo Credit: Facebook
ಬೆಂಗಳೂರು: ಸಾಮಾನ್ಯವಾಗಿ ಮಧುಮೇಹ ಅಥವಾ ಡಯಾಬಿಟಿಸ್ ಖಾಯಿಲೆ ಇದ್ದವರು ಅನ್ನ ಸೇವನೆ ಮಾಡುವುದಕ್ಕಿಂತ ಹೆಚ್ಚು ಗೋಧಿ ಸೇವನೆ ಮಾಡುವುದು ಉತ್ತಮ ಎಂದು ಅನೇಕರು ಹೇಳುತ್ತಾರೆ. ಆದರೆ ಗೋಧಿಯನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡುವುದು ಮುಖ್ಯ.

ಆಯುರ್ವೇದದ ಪ್ರಕಾರ ನಾವು ಅಂಗಡಿಯಿಂದ ತಂದ ಗೋಧಿಯನ್ನು ಹಾಗೆಯೇ ತಿಂಡಿ ಮಾಡಿ ಸೇವನೆ ಮಾಡುವುದರಿಂದ ಶುಗರ್ ಕಂಟ್ರೋಲ್ ಆಗಲ್ಲ. ಅದರ ಬದಲು ಗೋಧಿಯನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸಿ ಸೇವನೆ ಮಾಡಿದರೆ ಮಾತ್ರ ಮಧುಮೇಹಿಗಳಿಗೆ ಉತ್ತಮ. ಗೋಧಿಯನ್ನು ಮಧುಮೇಹಿಗಳು ಸೇವನೆ ಮಾಡಬೇಕೆಂದರೆ ಈ ವಿಧಾನವನ್ನು ಅನುಸರಿಸಬೇಕು.

ಗೋಧಿ ಕಾಳನ್ನು ಅಂಗಡಿಯಿಂದ ತಂದ ತಕ್ಷಣ ಚೆನ್ನಾಗಿ ತೊಳೆದುಕೊಂಡು ರಾತ್ರಿಯಿಡೀ ನೆನೆ ಹಾಕಬೇಕು
ಬಳಿಕ ಇದನ್ನು ಮರುದಿನ ಬಿಸಿಲಿಗೆ ಒಣ ಹಾಕಿ ಚೆನ್ನಾಗಿ ಒಣಗಲು ಬಿಡಬೇಕು
ಈ ಗೋಧಿಯನ್ನು ಪುಡಿ ಮಾಡಿಕೊಂಡು ಬಳಸಿದರೆ ಮಧುಮೇಹಿಗಳಿಗೂ ಗೋಧಿ ಸೇವನೆಗೆ ಯೋಗ್ಯವಾಗಿರುತ್ತದೆ.

ಗೋಧಿ ರೆಡಿಮೇಡ್ ಹಿಟ್ಟನ್ನು ಬಳಸುವ ಬದಲು ಇಡೀ ಗೋಧಿಯನ್ನು ತಂದು ತೊಳೆದು ಪುಡಿ ಮಾಡಿ ಬಳಸುವುದು ಕೇವಲ ಮಧುಮೇಹಿಗಳಿಗೆ ಮಾತ್ರವಲ್ಲ, ಸಾಮಾನ್ಯರಿಗೂ ಆರೋಗ್ಯಕರವಾಗಿರುತ್ತದೆ. ಗೋಧಿಯಲ್ಲೂ ಶುಗರ್ ಅಂಶ ಇದ್ದೇ ಇರುತ್ತದೆ. ಆದರೆ ಮೇಲೆ ಹೇಳಿದಂತೆ ಸಂಸ್ಕರಿಸಿ ಸೇವನೆ ಮಾಡುವುದರಿಂದ ಆ ಅಂಶವೂ ಹೋಗುತ್ತದೆ. ಇದು ಮಧುಮೇಹಿಗಳಿಗೆ ಆರೋಗ್ಯಕರವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ