ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ವಿಪರೀತ ಮಳೆಯಿಂದಾಗಿ ಒದ್ದೆಯಾಗಿದ್ದ ಬೆಂಗಳೂರಿನಲ್ಲಿ ಈಗ ಕಳೆದ ಒಂದು ವಾರದಿಂದ ವಿಪರೀತ ಚಳಿಯ ವಾತಾವರಣವಿದೆ. ಇದರಿಂದಾಗಿ ಶೀತ, ವೈರಲ್ ಜ್ವರದ ಪ್ರಮಾಣ ಹೆಚ್ಚುತ್ತಿದೆ.
ರಾಜ್ಯ ರಾಜಧಾನಿಯಲ್ಲಿ ಇಡೀ ದಿನ ವಿಪರೀತ ಚಳಿ, ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಇದರಿಂದಾಗಿ ಶೀತ, ಗಂಟಲು ನೋವು, ಕಫ, ತಲೆನೋವು, ವೈರಲ್ ಜ್ವರದ ಪ್ರಕರಣಗಳು ಹೆಚ್ಚಾಗಿವೆ. ವಿಶೇಷವಾಗಿ ಶಾಲೆಗೆ ಹೋಗುವ ಮಕ್ಕಳಲ್ಲಿ ಈ ರೀತಿಯ ರೋಗಗಳು ಹೆಚ್ಚುತ್ತಿವೆ.
ಹೀಗಾಗಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ತಜ್ಞರೂ ಹೇಳುತ್ತಿದ್ದಾರೆ. ಶಾಲೆಗೆ ಹೋಗುವ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಕೆಲವೊಂದು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು ಉತ್ತಮ.
-
ಜ್ವರ, ಶೀತದ ಲಕ್ಷಣವಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಲೇಬೇಡಿ
-
ಮಕ್ಕಳಿಗೆ ಶಾಲೆಗೂ ಬಿಸಿ ನೀರನ್ನೇ ಸೇವನೆ ಮಾಡಲು ಕೊಡಿ
-
ಮನೆಯಲ್ಲಿ ರಾತ್ರಿ ಮಲಗುವ ಮುನ್ನ ಬಿಸಿ ನೀರಿನ ಗಾರ್ಗಲ್ ಮಾಡಲು ಹೇಳಿ
-
ಶಾಲೆಗೆ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಿ ಹೋಗಿ
-
ಆದಷ್ಟು ಹೊರಾವರಣದಲ್ಲಿ ಆಡುವಾಗ ಧೂಳು, ನೀರಿನಲ್ಲಿ ಆಡಲು ಬಿಡಬೇಡಿ
-
ಮಕ್ಕಳಿಗೆ ದೇಹ ಬೆಚ್ಚಗಾಗಿಸಲು ಸೂಪ್, ಕಷಾಯದಂತಹ ಪಾನೀಯಗಳನ್ನು ನೀಡಿ
-
ಜಿಡ್ಡು, ಕರಿದ ಆಹಾರಗಳನ್ನು ಸೇವಿಸಿದರೆ ಜೀರ್ಣ ಸಮಸ್ಯೆಯಾಗಬಹುದು
-
ಆದಷ್ಟು ಪೌಷ್ಠಿಕಾಂಶವಿರುವ ಹಣ್ಣು, ತರಕಾರಿಗಳನ್ನು ಸೇವಿಸಲು ಕೊಡಿ
-
ಎಲ್ಲಕ್ಕಿಂತ ಮುಖ್ಯವಾಗಿ ಚಳಿಗಾಲದಲ್ಲಿ ಹೆಚ್ಚು ನೀರು ಸೇವನೆ ಮಾಡುವುದು ಮುಖ್ಯ