ಬೆಂಗಳೂರು: ಪದೇ ಪದೇ ಕೈ ಅಥವಾ ಕಾಲು ಜೋಮು ಹಿಡಿದಂತಾಗುತ್ತದೆಯೇ? ಇಂತಹ ಸಮಸ್ಯೆ ಕಂಡುಬರುತ್ತಿದ್ದರೆ ನೀವು ತಡಮಾಡದೇ ವೈದ್ಯರನ್ನು ಸಂಪರ್ಕಿಸಬೇಕು. ಯಾಕೆ ಇಲ್ಲಿ ನೋಡಿ.
ಕೈ ಜೋಮು ಹಿಡಿಯುವುದು ಸಹಜವಲ್ಲ. ಇದು ಕೆಲವೊಂದು ಖಾಯಿಲೆಯ ಲಕ್ಷಣವೂ ಆಗಿರಬಹುದು. ಕೈ ಅಥವಾ ಕಾಲಿನಲ್ಲಿ ಇರುವೆ ಹರಿವಂತಾಗುವುದು, ಮಾಂಸಖಂಡ ಹಿಡಿದಿಟ್ಟುಕೊಂಡಂತಾಗುವುದು ಜೋಮು ಹಿಡಿಯುವುದರ ಲಕ್ಷಣಗಳಾಗಿವೆ. ಪದೇ ಪದೇ ಹೀಗಾಗುತ್ತಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
ಕೈ ಅಥವಾ ಕಾಲು ಕಾರಣವಿಲ್ಲದೇ ಜೋಮು ಹಿಡಿದಂತಾಗುತ್ತಿದ್ದರೆ ಅದು ಮಧುಮೇಹ ಖಾಯಿಲೆಯ ಲಕ್ಷಣವಾಗಿರಬಹುದು. ದೇಹದಲ್ಲಿ ಸಕ್ಕರೆಯ ಮಟ್ಟ ಏರುಪೇರಾದಾಗ ನರಗಳ ಮೇಲೆ ಪರಿಣಾಮ ಬೀರುತ್ತದೆ. ಸಕ್ಕರೆ ಮಟ್ಟ ಏರುವುದರಿಂದ ಜೋಮು ಹಿಡಿದಂತಾಗಬಹುದು.
ಇದಲ್ಲದೆ ಥೈರಾಯ್ಡ್ ಹಾರ್ಮೋನ್ ಸಮಸ್ಯೆಯಿದ್ದಾಗ, ದೇಹ ನಿರ್ಜಲೀಕರಣಕ್ಕೊಳಗಾದಾಗ, ವಿಟಮಿನ್ ಬಿ6 ಕೊರತೆಯಾದಾಗ, ರಕ್ತಹೀನತೆಯ ಸಮಸ್ಯೆಯಾದಾಗ, ವಿಟಮಿನ್ ಬಿ12 ಕೊರತೆಯಿದ್ದರೆ, ನರಗಳಲ್ಲಿ ಬ್ಲಾಕೇಜ್ ಇರುವುದರಿಂದ, ಹೃದಯದ ಸಮಸ್ಯೆಯಿದ್ದರೆ ಈ ರೀತಿ ಆಗುವ ಸಂಭವವಿರುತ್ತದೆ. ಹೀಗಾಗಿ ಪದೇ ಪದೇ ಜೋಮು ಹಿಡಿದಂತಾಗುತ್ತಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.